ರಾಯಚೂರು: ವ್ಯಕ್ತಿಯೊಬ್ಬ ರಸ್ತೆಯಲ್ಲಿ ಸಾವನ್ನಪ್ಪಿದ್ದ ಎಂದೇ ಎಲ್ಲರೂ ಭಾವಿಸಿದ್ದರು. ಹೀಗಾಗಿ ಆ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ಮಾಡಲು ಮುಂದಾಗಿದ್ದರು. ಆದರೆ, ಈ ಸಂದರ್ಭದಲ್ಲಿ ಕುತ್ತಿಗೆಯಲ್ಲಿ ಹಗ್ಗದ (Rope) ಗುರುತು ಪತ್ತೆಯಾಗಿದೆ ಎನ್ನಲಾಗಿದೆ.
ಈ ಘಟನೆ ದೇವದುರ್ಗ (Devadurga) ತಾಲೂಕಿನ ಸುಂಕೇಶ್ವರಹಾಳದಲ್ಲಿ (Sunkeshwarhal) ನಡೆದಿದೆ. ಲಾಲ್ ಸಾಬ್ (33) ಸಾವನ್ನಪ್ಪಿದ ವ್ಯಕ್ತಿ. ಮೃತ ದೇಹದ ಕುತ್ತಿಗೆ ಮೇಲಿನ ಗುರುತು ಹಲವು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಸದ್ಯ ಈ ಕುರಿತು ಕೊಲೆ ಪ್ರಕರಣ ದಾಖಲಾಗಿದೆ. ಯಾರೋ ಕೊಲೆ ಮಾಡಿ ಶವವನ್ನು ರಸ್ತೆಗೆ ಎಸೆದು ಹೋಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಕುರಿತು ಗಬ್ಬೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಅನುಮಾನದ ಮೇಲೆ ಪೊಲೀಸರು ಹಲವರನ್ನು ವಿಚಾರಣೆ ನಡೆಸಿದ್ದಾರೆ. ತನಿಖೆಯ ನಂತರ ಸತ್ಯ ಹೊರ ಬರಬೇಕಿದೆ.