ಒತ್ತಡ ಅನ್ನೋದು ಮನುಷ್ಯನ ಜೀವನದ ಒಂದು ಅಂಗವಾಗಿ ಬಿಟ್ತಿದೆ. ಯಾರನ್ನ್ ಕೇಳಿದ್ರು ಅಯ್ಯೋ ಸಿಕ್ಕಾಪಟ್ಟೆ ಸ್ಟ್ರೆಸ್ ಇದೆ ಅಂತಾರೆ. ಇದ್ರಿಂದ ಹೊರಗೆ ಬರಲು ಏನ್ಮಾಡ್ಬೇಕು ಬನ್ನಿ ನೋಡೋಣ.
ಒತ್ತಡವನ್ನ ನಿಭಾಯಿಸುವುದು ಒಬ್ಬೊಬ್ಬರದ್ದು ಒಂದೊಂದು ರೀತಿ ಟೆಕ್ನಿಕ್ ಇರುತ್ತೆ. ಕೆಲವರು ಹಾಡು ಕೇಳ್ತಾರೆ. ಕೆಲವರು ತಮಗೆ ಇಷ್ಟವಾದ ಕೆಲಸವನ್ನ ಮಾಡುತ್ತಾರೆ. ಇನ್ನು ಕೆಲವರು ಡ್ಯಾನ್ಸ್ ಮಾಡುತ್ತಾರೆ. ಮತ್ತೆ ಕೆಲವರು ಟಿವಿ ನೋಡುತ್ತಾ ಸುಮ್ನೆ ಕಾಲ ಕಳೆಯುತ್ತಾರೆ. ಕೆಲವರಂತೂ ಬೇಕಾ ಬಿಟ್ಟಿ ಆಹಾರ ಸೇವಿಸುತ್ತಾರೆ.
ಒತ್ತದ ಹೆಚ್ಚಾದಾಗ ಈ ಅಹಾರಗಳನ್ನ ತಿನ್ನಲೇಬಾರ್ದು:
ಸ್ವೀಟ್ಸ್(sweets): ಒತ್ತಡದಲ್ಲಿ ಇದ್ದಾಗ ಸಿಹಿ ಪದಾರ್ಥ ದೇಹಕ್ಕೆ ಒಳ್ಳೆಯದಲ್ಲ. ಸಿಹಿ ಪದಾರ್ಥ ಯಾವುದೇ ತಿಂದರೂ ಕೂಡ ದೇಹದಲ್ಲಿರುವ ಸಕ್ಕರೆ ಪ್ರಮಾಣ ಏರಿಳಿತವಾಗುತ್ತದೆ.
ಖರಿದ ಪದಾರ್ಥಗಳು (Fried Items): ನೀವು ಒತ್ತಡದಲ್ಲಿ ಇದ್ದಾಗ ಸಂಸ್ಕರಿಸಿದ ಆಹಾರ ಹಾಗೂ ಖರಿದ ಪದಾರ್ಥಗಳನ್ನು ತಿನ್ನಬಾರದು. ಇದರಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗಿ ದೇಹದ ಪರಿಣಾಮ ಬೀಳುತ್ತದೆ. ಇದರಿಂದ ಒತ್ತಡ ಮತ್ತಷ್ಟು ಹೆಚ್ಚುತ್ತದೆ.
ಕೆಫೇನ್ ಸೇವನೆ: ಒತ್ತಡ ಹೆಚ್ಚಾದಾಹ ಕೆಫೇನ್ ಸೇವನೆ ಮಾಡುವವರ ಸಂಖ್ಯೆ ಹೆಚ್ಚು. ಕಾಫಿ ಕುಡಿದ್ರೆ ಟೆನ್ಶನ್ ಕಡಿಮೆಯಾಗುತ್ತೆ ಎಂದು ಕಾಫಿ ಕುಡಿಯುತ್ತಾರೆ. ಬರೀ ಕಾಫಿ ಮಾತ್ರವಲ್ಲ. ಕೆಫೇನ್ ಇರುವ ಯಾವುದೇ ಆಹಾರ ಕೂಡ ಒತ್ತಡ ಹೆಚ್ಚು ಮಾಡುತ್ತದೆ. ಇದರಿಂದಾಗಿ ನರಮಂಡಲವು ಅತೀಯಾಗಿ ಕ್ರಿಯಾಶೀಲವಾಗುತ್ತದೆ.