ಲೈಂಗಿಕ ಜೀವನ ಚೆನ್ನಾಗಿದ್ರೆ ಸಂಸಾರ ಕೂಡ ಚೆನ್ನಾಗಿರುತ್ತೆ. ಇಲ್ಲವಾದಲ್ಲಿ ಜೀವನದಲ್ಲಿ ನಿರಾಸೆ, ಆತ್ಮವಿಶ್ವಾಸದ ಕೊರತೆ ಕಾಡುತ್ತದೆ. ಪ್ರತಿ ಎಂಟು ಪುರುಷರಲ್ಲಿ ಒಬ್ಬರು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಒಳಗಾಗ್ತಾರೆ. ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಕೇವಲ ಲೈಂಗಿಕ ಜೀವನದ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ಬದಲಾಗಿ ವ್ಯಕ್ತಿಯ ಆತ್ಮವಿಶ್ವಾಸಕ್ಕು ಧಕ್ಕೆಯುಂಟಾಗುತ್ತದೆ. ಇದಕ್ಕೆ ಕೆಲವರು ವಯಾಗ್ರದ ಮೊರೆ ಹೋಗುತ್ತಾರೆ.
ಆದರೆ ಇದಕ್ಕೆ ಮದ್ದು ಅಡುಗೆ ಮನೆಯಲ್ಲೇ ಇದೆ. ಅವಾಕಾಡೊ ಅಂದ್ರೆ ಬೆಣ್ಣೆ ಹಣ್ಣು ತಿನ್ನುವುದರಿಂದ ಪುರುಷರಲ್ಲಿ ವೀರ್ಯಾಣು ಸಂಖ್ಯೆ ಹೆಚ್ಚಿಸುತ್ತದೆ. ಪರುಷ ಬಂಜೆತನಕ್ಕೆ ಚಿಕಿತ್ಸೆ ನೀಡಲು ಇದು ಪರಿಣಾಮಕಾರಿಯಾಗಿದೆ.
ಡಾರ್ಕ ಚಾಕೊಲೇಟ್ ಕೂಡ ಆರೋಗ್ಯಕ್ಕೆ ಒಳ್ಳೆಯದು. ನಿಮಿರುವಿಕೆ ಅಪಸಾಮಾನ್ಯ ಕ್ರಿಯೆ ಹೋಗಲಾಡಿಸುವ ಕೆಲಸವನ್ನು ಡಾರ್ಕ್ ಚಾಕೊಲೇಟ್ ಮಾಡುತ್ತದೆ. ಡಾರ್ಕ ಚಾಕೊಲೇಟ್ ನಲ್ಲಿ ಸಿರೊಟೋನಿನ್ ಹಾಗೂ ಫೆನೆಥೈಲಮೈನ್ ಇರುತ್ತದೆ. ಇದು ಸೆಕ್ಸ್ ಲೈಫ್ ನ್ನು ಸುಧಾರಿಸುತ್ತದೆ.
ಬಾಳೆ ಹಣ್ಣಿನಲ್ಲಿ ಪೊಟ್ಯಾಸಿಯಂ ಸಮೃದ್ದವಾಗಿರುತ್ತದೆ. ಇದು ರಕ್ತದ ಹರಿವನ್ನು ಉತ್ತೇಜಿಸುತ್ತದೆ. ಬಾಳೆ ಹಣ್ಣಿನಲ್ಲಿ ವಿಟಾಮಿನ್ ಬಿ ಇದ್ದು, ಶಕ್ತಿ ಹೆಚ್ಚಳಕ್ಕೆ ಸಹಾಯಕಾರಿಯಾಗಿದೆ.
ದಾಳಿಂಬೆ ಹಣನ್ನ ನಿಯಮಿತವಾಗಿ ಸೇವಿಸಬೇಕು. ಇದು ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ವಯಾಗ್ರದ ಕೆಲಸವನ್ನು ಮಾಡುತ್ತದೆ.
ಪಾಲಕ್ ಸೊಪ್ಪು, ಸೇಬು ಹಣ್ಣು, ಕುಂಬಳಕಾಯಿ ಬೀಜ ಇವೆಲ್ಲವು ಕೂಡ ಆರೋಗ್ಯ ಸುಧಾರಿಸುವುದರ ಜೊತೆಗೆ ಲೈಂಗಿಕ ಹಾರ್ಮೋನ್ ಗಳನ್ನು ಉತ್ತೇಜಿಸುವ ಕೆಲಸವನ್ನು ಮಾಡುತ್ತದೆ.