Kornersite

Just In Sports

IPL 2023: ಮುಂಬಯಿ ಸೋಲಿಸಿ, ಮತ್ತೊಮ್ಮೆ ಫೈನಲ್ ಪ್ರವೇಶಿಸಿದ ಗುಜರಾತ್; ಚೆನ್ನೈ ತಂಡದೊಂದಿಗೆ ಕಾದಾಟ!

ಅಹಮದಾಬಾದ್‌: ಗುಜರಾತ್ ಟೈಟಾನ್ಸ್ ತಂಡವು ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶ ಮಾಡಿದೆ.

ಶುಭಮನ್‌ ಗಿಲ್‌ ಸ್ಫೋಟಕ ಶತಕ ಹಾಗೂ ಸಂಘಟಿತ ಬೌಲಿಂಗ್‌ ಪ್ರದರ್ಶನದಿಂದಾಗಿ ಗುಜರಾತ್‌ ಟೈಟಾನ್ಸ್‌ ತಂಡವು ಮುಂಬಯಿ ವಿರುದ್ಧ 62 ರನ್‌ ಗಳ ಭರ್ಜರಿ ಜಯದೊಂದಿಗೆ ಸತತ 2ನೇ ಬಾರಿಗೆ ಐಪಿಎಲ್‌ ಫೈನಲ್ ಪ್ರವೇಶ ಮಾಡಿದೆ. 5 ಬಾರಿ ಚಾಂಪಿಯನ್ಸ್‌ ಪಟ್ಟಕ್ಕೆ ಏರಿದ್ದ ಮುಂಬ ಇಂಡಿಯನ್ಸ್‌ ಸೋಲಿನೊಂದಿಗೆ 2023ರ ಐಪಿಎಲ್‌ ಆವೃತ್ತಿಗೆ ವಿದಾಯ ಹೇಳಿದೆ. ಮೇ 28ರಂದು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ನಲ್ಲಿ ಗುಜರಾತ್ ಕಾದಾಟ ನಡೆಸಲಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಟೈಟಾನ್ಸ್‌ 20 ಓವರ್‌ಗಳಲ್ಲಿ 20 ಓವರ್‌ಗಳಲ್ಲಿ 233 ರನ್‌ ಗಳಿಸಿತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ 18.2 ಓವರ್‌ಗಳಲ್ಲಿ 171 ರನ್‌ಗಳಿಗೆ ಸರ್ವಪತನ ಕಂಡಿತು. ಆರಂಭದಲ್ಲೇ ರೋಹಿತ್‌ ಶರ್ಮಾ ಹಾಗೂ ನೆಹಾಲ್‌ ವಧೇರಾ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ನಂತರ ಕಣಕ್ಕಿಳಿದ 14 ಎಸೆತಗಳಲ್ಲಿ ವರ್ಮಾ 307.14 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿ ಸ್ಫೋಟಕ 43 ರನ್‌ ಸಿಡಿಸಿ ತಂಡಕ್ಕೆ ಚೇತರಿಕೆ ನೀಡಿದರು.

4ನೇ ವಿಕೆಟ್‌ಗೆ ಜೊತೆಯಾದ ಕ್ಯಾಮರೂನ್‌ ಗ್ರೀನ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಜೋಡಿ 32 ಎಸೆತಗಳಲ್ಲಿ 52 ರನ್‌ ಜೊತೆಯಾಟ ನೀಡಿತ್ತು. ಅಷ್ಟರಲ್ಲೇ 20 ಎಸೆತಗಳಲ್ಲಿ 30 ರನ್‌ ಗಳಿಸಿದ್ದ ಗ್ರೀನ್ ಔಟ್ ಆದರು. ಸೂರ್ಯಕುಮಾರ್‌ ಯಾದವ್‌, ತಂಡಕ್ಕೆ ಗೆಲುವು ತಂದುಕೊಡುತ್ತಾರೆ ಎಂಬ ನಿರೀಕ್ಷೆಯಿತ್ತು. ಆದ್ರೆ ಬೇಡದ ಶಾಟ್‌ ಹೊಡೆಯಲು ಯತ್ನಿಸಿ ಸೂರ್ಯ ಕ್ಲೀನ್‌ ಬೌಲ್ಡ್‌ ಆಗಿ ತಂಡದ ಗೆಲುವಿನ ಕನಸನ್ನ ನುಚ್ಚು ನೂರು ಮಾಡಿದರು. ಸೂರ್ಯಕುಮಾರ್‌ ಯಾದವ್‌ 61 ರನ್‌ ಗಳಿಸಿ ಔಟಾಗುತ್ತಿದ್ದಂತೆ ವಿಷ್ಣು ವಿನೋದ್‌ 5 ರನ್‌ ಗಳಿಸಿ ಔಟಾದರು. ಟಿಮ್‌ ಡೇವಿಡ್‌ 2 ರನ್‌, ಕ್ರಿಸ್‌ ಜೋರ್ಡಾನ್‌ 2 ರನ್‌ ಔಟಾದರು.

ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಟೈಟಾನ್ಸ್‌ತಂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾದರೂ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಬೃಹತ್‌ ಮೊತ್ತ ದಾಖಲಿಸಿತು. 6.3 ಓವರ್‌ಗಳಲ್ಲಿ 54 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡರು. 2ನೇ ವಿಕೆಟ್‌ಗೆ 16.5 ಓವರ್‌ಗಳಲ್ಲಿ ತಂಡದ ಮೊತ್ತ 192ಕ್ಕೆ ಏರಿತ್ತು. ಶುಭಮನ್‌ ಗಿಲ್‌ ಜೋಡಿ 64 ಎಸೆತಗಳಲ್ಲಿ 138 ರನ್‌ ಗಳಿಸಿತ್ತು. ಮೊದಲ 32 ಎಸೆತಗಳಲ್ಲಿ 50 ರನ್‌ ಗಳಿಸಿದ್ದ ಗಿಲ್‌, ಮುಂದಿನ 17 ಎಸೆತಗಳಲ್ಲಿ 50 ರನ್‌ ಚಚ್ಚಿ ಶತಕ ಪೂರೈಸಿದರು. ಕೊನೆಗೆ 60 ಎಸೆತಗಳನ್ನು ಎದುರಿಸಿ 10 ಭರ್ಜರಿ ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 129 ರನ್‌ ಗಳಿಸಿ ಔಟಾದರು.

You may also like

Sports

ಡಿವೈನ್ ಭರ್ಜರಿ ಆಟಕ್ಕೆ ಮಂಕಾದ ಜೈಂಟ್ಸ್!

ಮುಂಬಯಿ : ಆಲ್‌ ರೌಂಡರ್‌ ಸೋಫಿ ಡಿವೈನ್‌ ಭರ್ಜರಿ ಆಟಕ್ಕೆ ಗುಜರಾತ್ ಜೈಂಟ್ಸ್ ತಂಡವು ಸೋಲು ಒಪ್ಪಿಕೊಳ್ಳುವಂತಾಯಿತು.ಗುಜರಾತ್‌ ಜೈಂಟ್ಸ್‌ ವಿರುದ್ಧ ಆರ್ ಸಿಬಿ 8 ವಿಕೆಟ್‌ ಗಳ
Sports

ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಇನ್ನಿಲ್ಲ!

ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಹಾಗೂ ಆಲ್ ರೌಂಡರ್ ಆಟಗಾರ ಸಲೀಂ ದುರಾನಿ ವಯೋಸಹಜ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ.1960ರ ದಶಕದಲ್ಲಿ ಭಾರತದ ಆಲ್ ರೌಂಡರ್