ಭಾರತದ ಹೊಸ ಸಂಸತ್ ಭವನದ ಉದ್ಘಾಟನೆಯ ಹಿಂದಿನ ದಿನ ಅಧೀನಂ ಪೀಠಾಧಿಪತಿ ಪವಿತ್ರ ರಾಜದಂಡ ಸೆಂಗೋಲ್ (Sengol) ಅನ್ನು ಪ್ರಧಾನಿ ನರೇಂದ್ರ ಮೋದಿ (Narendera Modi) ಅವರಿಗೆ ಹಸ್ತಾಂತರಿಸಿದ್ದಾರೆ.
ಅಲ್ಲದೇ, ಪ್ರಧಾನಿಗೆ ಉಡುಗೊರೆ ಕೂಡ ನೀಡಿದ್ದಾರೆ. ದೆಹಲಿಗೆ ತಲುಪಿದ್ದ ಅಧೀನರನ್ನು ಪ್ರಧಾನಿ ಮೋದಿ ಅವರು ತಮ್ಮ ನಿವಾಸದಲ್ಲಿ ಭೇಟಿ ಮಾಡಿದ್ದು, ಅಧೀನರ ಆಶೀರ್ವಾದ ಪಡೆದರು. ಭಾನುವಾರ ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ಭವನದಲ್ಲಿ ಐತಿಹಾಸಿಕ ಮತ್ತು ಪವಿತ್ರವಾದ ಸೆಂಗೋಲ್ ಸ್ಥಾಪಿಸಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು 21 ಅಧೀನರು ಈ ಹಿಂದೆ ಚೆನ್ನೈನಿಂದ ದೆಹಲಿಗೆ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಲು ಚೆನ್ನೈನಿಂದ ದೆಹಲಿಗೆ ತೆರಳಿದ ಅಧೀನಂಗಳಲ್ಲಿ ಧರ್ಮಪುರಂ ಅಧೀನಂ, ಪಳನಿ ಅಧೀನಂ, ವಿರುಧಾಚಲಂ ಅಧೀನಂ ಮತ್ತು ತಿರುಕೋಯಿಲೂರ್ ಅಧೀನಂ ಸೇರಿದ್ದಾರೆ.