Bangalore : ಸಿಎಂ ಸಿದ್ದರಾಮಯ್ಯ ಸಂಪುಟ (Siddaramaiah Cabinet) ಸಂಪೂರ್ಣ ಭರ್ತಿಯಾಗಿದೆ. ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮಾನತೆಗೆ ಒತ್ತು ನೀಡಿ ಕಾಂಗ್ರೆಸ್ ಹೈಕಮಾಂಡ್ ಸಚಿವರ ಪಟ್ಟಿ ಫೈನಲ್ ಮಾಡಿದೆ.
ಕೆಲವು ಹಿರಿಯರಿಗೆ ಕೊಕ್ ನೀಡಲಾಗಿದೆ. ಎರಡನೇ ಹಂತತದಲ್ಲಿ ಹಳಬರು ಹಾಗೂ ಹೊಸಬರನ್ನು ಒಳಗೊಂಡ 24 ಸಚಿವರು ಇಂದು(ಮೇ 27) ಪ್ರಮಾಣವಚನ ಸ್ವೀಕರಿಸಿದ್ದಾರೆ. ಒಟ್ಟು 34 ಜನರ ಸರ್ಕಾರ ಅನುಭವಿ- ಉತ್ಸಾಹಿಗಳಿಂದ ಸಿದ್ದರಾಮಯ್ಯ ಸಂಪುಟ ಕೂಡಿದೆ. ಒಟ್ಟು 8 ಜನರು ಇದೇ ಮೊದಲ ಬಾರಿಗೆ ಸಚಿವರಾಗಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ್, ಕೃಷ್ಣಬೈರೇಗೌಡ, ಡಾ.ಜಿ ಪರಮೇಶ್ವರ್, ಕೆಜೆ ಜಾರ್ಜ್, ಎಚ್ಕೆ ಪಾಟೀಲ್, ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್ ಖಾನ್, ದಿನೇಶ್ ಗುಂಡೂರಾವ್, ರಾಮಲಿಂಗರೆಡ್ಡಿ, ಈಶ್ವರ್ ಖಂಡ್ರೆ, ಹೆಚ್ ಸಿ ಮಹಾದೇವಪ್ಪ, ಶರಣ ಪ್ರಕಾಶ್ ಪಾಟೀಲ್ , ಚೆಲುವನಾರಾಯಣ ಸ್ವಾಮಿ, ಡಿ ಸುಧಾಕರ್, ಸಂತೋಷ್ ಲಾಡ್, ಎಂಬಿ ಪಾಟೀಲ್, ಕೆಎಚ್ ಮುನಿಯಪ್ಪ, ಆರ್.ಬಿ.ತಿಮ್ಮಾಪುರ ಸೇರಿದಂತೆ ಇನ್ನು ಕೆಲವರು ಸಿದ್ದರಾಮಯ್ಯನವರ ಕ್ಯಾಬಿನೆಟ್ನಲ್ಲಿ ಅನುಭವಿ ಸಚಿವರಾಗಿದ್ದಾರೆ.
ಮೊದಲ ಬಾರಿಗೆ ಲಕ್ಷ್ಮೀ ಹೆಬ್ಬಾಳ್ಕರ್, ಬಿ ನಾಗೇಂದ್ರ, ಬೋಸರಾಜು, ಮಧುಬಂಗಾರಪ್ಪ, ಬೈರತಿ ಸುರೇಶ್, ಎಸ್ಎಸ್ ಮಲ್ಲಿಕಾರ್ಜುನ, ರಹೀಂ ಖಾನ್, ಕೆ.ವೆಂಕಟೇಶ್, ಶಿವಾನಂದ ಪಾಟೀಲ್, ಶರಣಪ್ಪ ದರ್ಶನಪುರ, ಮಕಾಳ್ ವೈದ್ಯ, ಡಾ. ಎಂಸಿ ಸುಧಾಕರ್ ಅವರು ತಮ್ಮ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ಸಚಿವರಾಗಿದ್ದಾರೆ. ಸಿದ್ದರಾಮಯ್ಯನವರೊಳಗೊಂಡು 34 ಜನರ ಪೂರ್ಣ ಪ್ರಮಾಣದ ಸರ್ಕಾರ ರಚನೆಯಾಗಿದ್ದು, ಸರ್ಕಾರದ ಮುಂದೆ ಹಲವು ಸವಾಲುಗಳಿವೆ. ಡಿಕೆ ಶಿವಕುಮಾರ್ ಹಾಗೂ ಅವರ ತಂಡದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವುದೇ ಸಿದ್ದರಾಮಯ್ಯನವರಿಗೆ ಒಂದು ದೊಡ್ಡ ಸವಾಲ್ ಆಗಿದೆ. ಇಬ್ಬರೂ ಘಟಾನುಘಟಿ ನಾಯಕರು ಆಗಿದ್ದರಿಂದ ಸ್ವಲ್ಪ ಏರುಪೇರು ಆದರೂ ಸಿದ್ದರಾಮಯ್ಯನವರ ಅಧಿಕಾರಕ್ಕೆ ಅಡಚಣೆ ಆಗುವ ಸಾಧ್ಯತೆಗಳಿವೆ.