Kornersite

Bengaluru Just In Karnataka Politics State

Siddu Cabinet: ಹಲವು ನಾಯಕರಿಗೆ ಸಚಿವ ಸ್ಥಾನ ಮಿಸ್; ತೀವ್ರ ಆಕ್ರೋಶ!

ಬೆಂಗಳೂರು : ಕಾಂಗ್ರೆಸ್‌ನ (Congress) 24 ಜನ ಶಾಸಕರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ಕೆಲವು ಹಿರಿಯ ನಾಯಕರಿಗೆ ಸಚಿವ ಸ್ಥಾನ ಮಿಸ್ ಆಗಿದ್ದು, ಆಕ್ರೋಶ ವ್ಯಕ್ತವಾಗುತ್ತಿದೆ.

ಹಿರಿಯ ನಾಯಕರು ಮಂತ್ರಿಗಿರಿಗೆ ಲಾಬಿ ನಡೆಸಿದ್ದರು. ಆದರೆ ಹೈಕಮಾಂಡ್‌ (High Command) ಯಾವುದೇ ಲಾಬಿಗೆ ಬಗ್ಗದೇ ತನ್ನದೇ ಮಾನದಂಡ ಬಳಸಿ ಮಂತ್ರಿ ಸ್ಥಾನಕ್ಕೆ ಶಾಸಕರನ್ನು ಆಯ್ಕೆ ಮಾಡಿದೆ. ಬಂಜಾರ ಸಮಾಜದ ಏಕೈಕ ಶಾಸಕ ರುದ್ರಪ್ಪ ಲಮಾಣಿಗೂ ನಿರಾಸೆಯಾಗಿದೆ. ಬಿ.ಕೆ ಹರಿಪ್ರಸಾದ್, ಬಸವರಾಜ ರಾಯರೆಡ್ಡಿಗೂ ಮಂತ್ರಿ ಸ್ಥಾನ ಸಿಕ್ಕಿಲ್ಲ. ಬಿಜೆಪಿಗೆ ರಾಜೀನಾಮೆ ನೀಡಿ ಸ್ಪರ್ಧಿಸಿ ಸೋತಿದ್ದ ಶೆಟ್ಟರ್‌ ಅವರಿಗೆ ಪರಿಷತ್‌ ಸ್ಥಾನ ನೀಡಿ ಮಂತ್ರಿ ಮಾಡಬಹುದು ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಇನ್ನೂ ಲಕ್ಷ್ಮಣ ಸವದಿಗೂ ಮಂತ್ರಿಗಿರಿ ಸಿಗಬಹುದು ಎನ್ನಲಾಗಿತ್ತು. ಆದರೆ, ಇಬ್ಬರಿಗೂ ಹೈಕಮಾಂಡ್ ಮಣೆ ಹಾಕಿಲ್ಲ.

ಸಿದ್ದರಾಮಯ್ಯ (Siddaramaiah) ಸಂಪುಟದ ಎಲ್ಲ 34 ಸ್ಥಾನಗಳು ಭರ್ತಿಯಾಗಿದ್ದು ಇಂದು 24 ಶಾಸಕರು ಬೆಳಗ್ಗೆ 11:45ಕ್ಕೆ ರಾಜಭವನದ ಗಾಜಿನಮನೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕರ ಮಾಡಲಿದ್ದಾರೆ.

ಇವರಿಗೆಲ್ಲ ಟಿಕೆಟ್ ಮಿಸ್!

ಲಕ್ಷ್ಮಣ ಸವದಿ, ಜಗದೀಶ್‌ ಶೆಟ್ಟರ್, ರುದ್ರಪ್ಪ ಲಮಾಣಿ, ಬಿ.ಕೆ ಹರಿಪ್ರಸಾದ್, ಬಸವರಾಜ ರಾಯರೆಡ್ಡಿ, ವಿನಯ್ ಕುಲಕರ್ಣಿ, ತನ್ವೀರ್ ಸೇಠ್, ಶಾಮನೂರು ಶಿವಶಂಕರಪ್ಪ, ಆರ್.ವಿ ದೇಶಪಾಂಡೆ, ಹ್ಯಾರಿಸ್, ಶಿವಲಿಂಗೇಗೌಡ, ಅಜಯ್ ಸಿಂಗ್, ಟಿ.ಬಿ ಜಯಚಂದ್ರ, ಎಂ.ಕೃಷ್ಣಪ್ಪ, ವಿಜಯಾನಂದ ಕಾಶಪ್ಪನವರ್, ನರೇಂದ್ರಸ್ವಾಮಿ, ತುಕರಾಂ ಮಂತ್ರಿಸ್ಥಾನದಿಂದ ವಂಚಿತರಾಗಿದ್ದಾರೆ.

You may also like

Politics

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂ.ಬಿ. ಪಾಟೀಲ್ ಹೇಳಿದ್ದೇನು? ಯಾವಾಗ ಬಿಡುಗಡೆಯಾಗಲಿದೆ ಪಟ್ಟಿ?

ವಿಜಯಪುರ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿವೆ. ಈಗಾಗಲೇ ಕಾಂಗ್ರೆಸ್ ನ ಮೊದಲ
Politics

ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಕೊಪ್ಪಳ : ತಂದೆ- ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದಿದ್ದಾರೆ.ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ತಾಂಡಾದಲ್ಲಿ ಇಬ್ಬರು ಮಕ್ಕಳನ್ನು