ತುಮಕೂರು: ಶಾರ್ಟ್ ಸರ್ಕ್ಯೂಟ್ (Short Circuit) ನಿಂದಾಗಿ ಗ್ರಾಪಂ (Gram Panchayat) ಕಚೇರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕಂಪ್ಯೂಟರ್ ಸೇರಿದಂತೆ ಕಡತಗಳು ಸುಟ್ಟು ಭಸ್ಮವಾಗಿರುವ ಘಟನೆ ಜಿಲ್ಲೆಯಲ್ಲಿ (Tumakuru) ನಡೆದಿದೆ.
ಪಾವಗಡ (Pavagada) ತಾಲೂಕಿನ ಪೊನ್ನಸಂದ್ರ (Ponnasandra) ಗ್ರಾಪಂನಲ್ಲಿಯೇ ಈ ಘಟನೆ ನಡೆದಿದ್ದು, ವಿದ್ಯುತ್‌ನ ವೋಲ್ಟೇಜ್ ಹೆಚ್ಚಾದ ಹಿನ್ನೆಲೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಪ್ರಮುಖ ಫೈಲ್‌ಗಳು ಸೇರಿದಂತೆ ಕಂಪ್ಯೂಟರ್‌ಗಳು ಸುಟ್ಟು ಹೋಗಿವೆ. ಕೂಡಲೇ ಸಮಯದಲ್ಲಿ ಸ್ಥಳೀಯ ಗ್ರಾಮಸ್ಥರು ನೀರಿನಿಂದ ಬೆಂಕಿ ಆರಿಸಲು ಯತ್ನಿಸಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ. ಸ್ಥಳಕ್ಕೆ ಪಾವಗಡ ಅಗ್ನಿಶಾಮಕ (Fire Extinguisher) ಠಾಣೆಯ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.