ಐಫಾ ಪ್ರಶಸ್ತಿ (IIFA Awards 2023) ಪ್ರದಾನ ಸಮಾರಂಭವು ಅಬುದಾಭಿಯಲ್ಲಿ ನಡೆಯಿತು. ನಟ ಹೃತಿಕ್ ರೋಷನ್ (Hrithik Roshan) ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದರು.
‘ವಿಕ್ರಂ ವೇದ’ ಸಿನಿಮಾದಲ್ಲಿನ ನಟನೆಗೆ ಈ ಪ್ರಶಸ್ತಿ ಪಡೆದರು. ನಟಿ ಆಲಿಯಾ ಭಟ್ (Alia Bhatt) ಅವರು ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ ಅಭಿನಯಕ್ಕಾಗಿ ‘ಅತ್ಯುತ್ತಮ ನಟಿ’ ಐಫಾ ಪ್ರಶಸ್ತಿಗೆ ಮುತ್ತಿಕ್ಕಿದರು.
ಈ ಕಾರ್ಯಕರ್ಮದಲ್ಲಿ ಸಿನಿ ತಾರೆಯರ ದಂಡೇ ಆಗಮಿಸಿತ್ತು. ಆಲಿಯಾ ಭಟ್ ಪರವಾಗಿ ನಿರ್ಮಾಪಕ ಜಯಂತಿ ಲಾಲ್ ಗಡಾ ಅವರು ಐಫಾ ಪ್ರಶಸ್ತಿ ಸ್ವೀಕರಿಸಿದರು. ಜುಗ್ ಜುಗ್ ಜಿಯೋ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅನಿಲ್ ಕಪೂರ್ ಅವರು ಅತ್ಯುತ್ತಮ ‘ಪೋಷಕ ನಟ’ ಪ್ರಶಸ್ತಿ ಪಡೆದಿದ್ದಾರೆ. ಚಿತ್ರರಂಗದಲ್ಲಿನ ಅಭೂತಪೂರ್ವ ಸಾಧನೆಗಾಗಿ ಕಮಲ್ ಹಾಸನ್ ಅವರಿಗೆ ಐಫಾ ಪ್ರಶಸ್ತಿ ನೀಡಲಾಗಿದೆ.
2023ನೇ ಸಾಲಿನ ಐಫಾ ಪ್ರಶಸ್ತಿ ಪಡೆದವರ ಪಟ್ಟಿ:
ಅತ್ಯುತ್ತಮ ನಟ: ಹೃತಿಕ್ ರೋಷನ್ (ವಿಕ್ರಂ ವೇದ)
ಅತ್ಯುತ್ತಮ ನಟಿ: ಆಲಿಯಾ ಭಟ್ (ಗಂಗೂಬಾಯಿ ಕಾಠಿಯಾವಾಡಿ)
ಅತ್ಯುತ್ತಮ ಪೋಷಕ ನಟ: ಅನಿಲ್ ಕಪೂರ್ (ಜುಗ್ ಜುಗ್ ಜಿಯೋ)
ಅತ್ಯುತ್ತಮ ಗಾಯಕಿ: ಶ್ರೇಯಾ ಘೋಷಾಲ್ (ಬ್ರಹ್ಮಾಸ್ತ್ರ)
ಅತ್ಯುತ್ತಮ ಗಾಯಕ: ಅರಿಜಿತ್ ಸಿಂಗ್ (ಕೇಸರಿಯಾ..)
ಅತ್ಯುತ್ತಮ ಪೋಷಕ ನಟಿ: ಮೌನಿ ರಾಯ್ (ಬ್ರಹ್ಮಾಸ್ತ್ರ)
ಅತ್ಯುತ್ತಮ ಹೊಸ ನಟ: ಬಬಿಲ್ ಖಾನ್ (ಕಲಾ)
ಅತ್ಯುತ್ತಮ ಹೊಸ ನಟ: ಶಾಂತನು ಮಹೇಶ್ವರಿ (ಗಂಗೂಬಾಯಿ ಕಾಠಿಯಾವಾಡಿ)
ಅತ್ಯುತ್ತಮ ಸಿನಿಮಾ: ದೃಶ್ಯಂ 2
ಅತ್ಯುತ್ತಮ ನಿರ್ದೇಶನ: ಆರ್. ಮಾಧವನ್ (ರಾಕೆಟ್ರಿ ದಿ ನಂಬಿ ಎಫೆಕ್ಟ್)
ಅತ್ಯುತ್ತಮ ಸಂಗೀತ ನಿರ್ದೇಶಕ: ಪ್ರೀತಮ್ (ಬ್ರಹ್ಮಾಸ್ತ್ರ)
ಅತ್ಯುತ್ತಮ ಸಾಹಿತ್ಯ: ಅಮಿತಾಭ್ ಭಟ್ಟಾಚಾರ್ಯ (ಕೇಸರಿಯಾ..)
ತಾಂತ್ರಿಕ ವಿಭಾಗದಲ್ಲಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಸಂಭಾಷಣೆ, ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಗಳು ಈ ಸಿನಿಮಾದ ಪಾಲಾಗಿವೆ. ಅತ್ಯುತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿ ವಿಕ್ರಂ ವೇದ ಚಿತ್ರಕ್ಕೆ ಸಿಕ್ಕಿದೆ. ಅತ್ಯುತ್ತಮ ಸಂಕಲನ ಪ್ರಶಸ್ತಿ ದೃಶ್ಯಂ 2 ಚಿತ್ರಕ್ಕೆ ಲಭಿಸಿದೆ.