NewDelhi: ಪ್ರತಿಯೊಬ್ಬರೂ ದೇಶವೇ ಮೊದಲು ಎಂಬ ಗುರಿಯೊಂದಿಗೆ ಸಾಗಬೇಕು. ಅಲ್ಲದೇ, ಪ್ರತಿಯೊಬ್ಬರೂ ತಮ್ಮ ಅಭಿವೃದ್ಧಿಗೆ ತಾವೇ ಶ್ರಮಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ನೂತನ ಸಂಸತ್ ಭವನ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಕಾರ್ಮಿಕರು (Labours) ಈ ಭವನವನ್ನು ಭವ್ಯಗೊಳಿಸಿದ್ದಾರೆ. ಇಲ್ಲಿ ಕೂರುವ ಸಂಸದರು ಇದನ್ನು ದಿವ್ಯಗೊಳಿಸಬೇಕಿದೆ. ಈ ಭವನ ಮುಂದಿನ ಪೀಳಿಗೆಗೆ ಮಾರ್ಗಸೂಚಿಯಾಗಲಿದೆ. ಇಲ್ಲಿ ಕೈಗೊಳ್ಳುವ ನಿರ್ಣಯ ಭಾರತ (India) ದ ಭವಿಷ್ಯ ರೂಪಿಸಲಿದೆ ಎಂದು ಹೇಳಿದರು.
ಸಂಸತ್ ಭವನ (New Parliament)ವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣ ಮಾಡಲಾಗಿದೆ. ಈ ಕಟ್ಟಡವು ಆಧುನಿಕ ಸೌಲಭ್ಯಗಳನ್ನು ಹೊಂದಿದೆ. 60 ಸಾವಿರಕ್ಕೂ ಅಧಿಕ ಕಾರ್ಮಿಕರಿಗೆ ಉದ್ಯೋಗ ನೀಡಿದೆ. ಅವರ ಶ್ರಮವನ್ನು ಗೌರವಿಸಲು ನಾವು ಡಿಜಿಟಲ್ ಗ್ಯಾಲರಿಯನ್ನು ರಚಿಸಿದ್ದೇವೆ. ಆಧುನಿಕ ಭಾರವನ್ನು ಇಡೀ ವಿಶ್ವವೇ ಗೌರವಿಸುತ್ತಿದೆ. ನಮ್ಮಲ್ಲಿ ಕಲೆ ಇದೆ, ಕೌಶಲ್ಯ ಇದೆ. ಈ ಭವನದ ಕಣಕಣದಲ್ಲಿಯೂ ಒಗ್ಗಟ್ಟಿದೆ. ಏಕ್ ಭಾರತ್.. ಶ್ರೇಷ್ಠ್ ಭಾರತ್ ಅನುರಣಿಸುತ್ತಿದೆ. ನಮ್ಮದು ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ.
ಭಿವೃದ್ಧಿಶೀಲ ರಾಷ್ಟ್ರಕ್ಕೆ ಹೊಸ ಸಂಸತ್ ಪ್ರೇರಣೆಯಾಗಿದೆ. ಕರ್ತವ್ಯವೇ ನಮಗೆ ಆದ್ಯತೆ ಆಗಬೇಕು. ಸುಧಾರಣೆಯ ದಿಕ್ಕಿನಲ್ಲೇ ನಾವು ಸದಾ ಸಾಗಬೇಕು. ಲೋಕ ಕಲ್ಯಾಣವೇ ಜೀವನ ಮಂತ್ರವಾಗಬೇಕು. ಲೋಕಸಭೆ ವಿನ್ಯಾಸಕ್ಕೆ ನವಿಲು ಪ್ರೇರಣೆಯಾಗಿದ್ದು, ಹಳೆಯ ಸಂಸತ್ತಿನಲ್ಲಿ ಸ್ಥಳಾವಕಾಶದ ಕೊರತೆ ಇತ್ತು. ಇದೇ ಕಾರಣಕ್ಕೆ ಹೊಸ ಸಂಸತ್ ನಿರ್ಮಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.