Kornersite

Entertainment Just In Sandalwood

ಕನ್ನಡಿಗರ ಮನ ಗೆದ್ದು, ವಿದೇಶದಲ್ಲಿ ಅಬ್ಬರಿಸಲು ಸಿದ್ಧವಾಗಿರುವ ಡೇರ್ ಡೆವಿಲ್ ಮುಸ್ತಾಫಾ!

ಕರ್ನಾಟಕದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧರಿತ ಡೇರ್‌ ಡೆವಿಲ್ ಮುಸ್ತಾಫಾ ಸಿನಿಮಾ ಈಗ ವಿದೇಶದಲ್ಲಿ ಸದ್ದು ಮಾಡಲು ಮುಂದಾಗಿದೆ.

ವಿದೇಶಕ್ಕೆ ಹೊರಟು ನಿಂತಿದೆ. ಅಮೆರಿಕಾ, ಯೂರೋಪ್‌, ದುಬೈನ ಹಲವೆಡೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. Dare Devil Musthafa: ಪೂರ್ಣಚಂದ್ರ ತೇಜಸ್ವಿ (Poornachandra Tejasvi) ಅವರ ಡೇರ್‌ ಡೆವಿಲ್‌ ಮುಸ್ತಾಫಾ ಕಥೆ ಬೆಳ್ಳಿತೆರೆ ಮೇಲೆ ಮಿನುಗುತ್ತಿದೆ. ಮೇ. 19ರಂದು ಬಿಡುಗಡೆಯಾಗಿದ್ದ ಈ ಸಿನಿಮಾವನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ಈ ಮೂಲಕ ಅಮೋಘ ಎರಡನೇ ವಾರಕ್ಕೂ ಸಿನಿಮಾ ದಾಪುಗಾಲಿಟ್ಟಿದೆ. ಹೀಗಾಗಿ ಈ ಚಿತ್ರ ವಿದೇಶದಲ್ಲಿಯೂ ಸದ್ದು ಮಾಡಲು ಮುಂದಾಗಿದೆ.

ಈ ಸಿನಿಮಾ ನೋಡಲೆಂದೇ ಜನ ಮತ್ತು ಪೂರ್ಣಚಂದ್ರ ತೇಜಸ್ವಿ ಅವರ ಓದುಗರು ಥಿಯೇಟರ್‌ ನತ್ತ ಆಗಮಿಸುತ್ತಿದ್ದಾರೆ. ಕಳೆದ ಆರೇಳು ತಿಂಗಳಿನಿಂದ ಥಿಯೇಟರ್ ನಲ್ಲಿ ಯಾವ ಚಿತ್ರಕ್ಕೂ ಸಿಗದ ಪ್ರತಿಕ್ರಿಯೆ ಈ ಚಿತ್ರಕ್ಕೆ ಸಿಕ್ಕಿದೆ. 40 ಕೇಂದ್ರಗಳಲ್ಲಿ ಡೇರ್‌ ಡೆವಿಲ್‌ ಮುಸ್ತಾಫಾ ಚಿತ್ರ ಒಳ್ಳೆಯ ಪ್ರದರ್ಶನ ಕಂಡಿದೆ. ಈ ಸಿನಿಮಾ ನೋಡಿದ ಪ್ರೇಕ್ಷಕ ಇದು ಹೃದಯ ಬೆಸೆಯುವ ಕಥೆಯಾಗಿದೆ. ಶಶಾಂಕ್ ಸೋಗಾಲ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನಟ ಡಾಲಿ ಧನಂಜಯ್ ಡಾಲಿ ಪಿಕ್ಚರ್ಸ್‌ನಡಿ ಈ ಚಿತ್ರವನ್ನು ನಾಡಿನ ಜನತೆಗೆ ಪ್ರಸೆಂಟ್‌ ಮಾಡಿದ್ದಾರೆ.

You may also like

Entertainment Gossip Mix Masala

ಆಸ್ಕರ್ ಇವೆಂಟ್ ನಲ್ಲಿ ಭಾಗವಹಿಸಲು ಹಣದ ಹೊಳೆಯನ್ನೇ ಹರಿಸಿರುವ ರಾಜಮೌಳಿ ಹಾಗೂ ತಂಡ

ಸ್ಟಾರ್ ನಿರ್ದೇಶಕ ರಾಜಮೌಳಿ ಅವರ ಶ್ರಮದಿಂದಾಗಿ ಭಾರತಕ್ಕೆ ಆಸ್ಕರ್ ಪ್ರಶಸ್ತಿ ಬರುವಂತಾಗಿದೆ. ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಆದರೆ,
Entertainment Politics

ರಾಜ್ಯ ರಾಜಕಾರಣಕ್ಕೆ ನಟಿ ರಮ್ಯಾ! ಬೆಂಗಳೂರಿನಿಂದ ಸ್ಪರ್ಧೆ?

ಬೆಂಗಳೂರು : ಕೆಲವು ಸಮಯದವರೆಗೆ ಚಿತ್ರರಂಗ ಹಾಗೂ ರಾಜಕಾರಣದಿಂದ ದೂರ ಇದ್ದ ನಟಿ ರಮ್ಯ, ಈಗ ಎರಡೂ ಕ್ಷೇತ್ರಗಳಲ್ಲಿ ಸಕ್ರೀಯರಾಗಿದ್ದಾರೆ. ಈಗಾಗಲೇ ಚಿತ್ರರಂಗದಲ್ಲಿ ಬ್ಯೂಸಿಯಾಗಿರುವ ಅವರು, ರಾಜಕೀಯದಲ್ಲಿಯೂ