Kornersite

Just In National Politics

Narendra Modi: ನೂತನ ಸಂಸತ್ ಸ್ಮರಣಾರ್ಥವಾಗಿ 75 ರೂ. ನಾಣ್ಯ, ಅಂಚೆ ಚೀಟಿ ಬಿಡುಗಡೆ!

ನವದೆಹಲಿ: ಇಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ನೂತನ ಸಂಸತ್ (New Parliament) ಭವನ ಉದ್ಘಾಟಿಸಿದ್ದಾರೆ. ಇದರ ಸಂತಸದ ಸ್ಮರಣಾರ್ಥವಾಗಿ ಅಂಚೆ ಚೀಟಿ (Postage Stamp) ಹಾಗೂ 75 ರೂ. ನಾಣ್ಯ (Rs 75 Coin) ಬಿಡುಗಡೆ ಮಾಡಿದ್ದಾರೆ.

ಬಿಡುಗಡೆಗೊಂಡಿರುವ ನಾಣ್ಯವು ವೃತ್ತಾಕಾರದಲ್ಲಿದ್ದು, 44 ಮಿ.ಮೀ. ವ್ಯಾಸ ಹೊಂದಿದೆ. ಶೇ.50ರಷ್ಟು ಬೆಳ್ಳಿ, ಶೇ.40ರಷ್ಟು ತಾಮ್ರ, ಶೇ. 5 ನಿಕಲ್ ಮತ್ತು ಶೇ.5ರಷ್ಟು ಸತು ಬಳಸಿ ನಾಣ್ಯ ತಯಾರಿಸಲಾಗಿದೆ. ಈ ನಾಣ್ಯ 35 ಗ್ರಾಂ ತೂಕ ಹೊಂದಿದೆ. ನಾಣ್ಯದ ಒಂದು ಬದಿ ಅಶೋಕ ಸ್ತಂಭದ ಸಿಂಹದ ಮುದ್ರೆ, ಸುತ್ತಲೂ ದೇವನಾಗರಿ ಲಿಪಿಯಲ್ಲಿ ಭಾರತ್’ ಮತ್ತು ಇಂಗ್ಲಿಷ್‍ನಲ್ಲಿಇಂಡಿಯಾ’ ಎಂದು ಬರೆಯಲಾಗಿದೆ. ಸಿಂಹದ ಮುದ್ರೆಯ ಕೆಳಗೆ ಅಂತಾರಾಷ್ಟ್ರೀಯ ಅಂಕಿಗಳಲ್ಲಿ 75 ಎಂದು ಮುದ್ರಿಸಲಾಗಿದೆ. ಅಲ್ಲದೆ ರೂ. ಚಿಹ್ನೆಯನ್ನು ಸಹ ಇರಿಸಲಾಗಿದೆ.

ಮತ್ತೊಂದು ಬದಿಯಲ್ಲಿ ಪಾರ್ಲಿಮೆಂಟ್‍ನ ಚಿತ್ರ ಮತ್ತು 2023ರ ಉಲ್ಲೇಖ ಮಾಡಲಾಗಿದೆ. ಇದು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ಭಾರತಕ್ಕೆ ಗೌರವದ ಸಂಕೇತವೂ ಆಗಿರಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

You may also like

Politics

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂ.ಬಿ. ಪಾಟೀಲ್ ಹೇಳಿದ್ದೇನು? ಯಾವಾಗ ಬಿಡುಗಡೆಯಾಗಲಿದೆ ಪಟ್ಟಿ?

ವಿಜಯಪುರ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿವೆ. ಈಗಾಗಲೇ ಕಾಂಗ್ರೆಸ್ ನ ಮೊದಲ
Politics

ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಕೊಪ್ಪಳ : ತಂದೆ- ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದಿದ್ದಾರೆ.ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ತಾಂಡಾದಲ್ಲಿ ಇಬ್ಬರು ಮಕ್ಕಳನ್ನು