Kornersite

Just In National Politics

New Parliament: ನೂತನ ಸಂಸತ್ ನಲ್ಲಿ ನ್ಯಾಯ ಸಂಕೇತಿಸುವ ಚಿನ್ನದ ದಂಡ ಪ್ರತಿಷ್ಠಾಪಿಸಿದ ಮೋದಿ!

ನವದೆಹಲಿ: ನೂತನ ಸಂಸತ್ (New Parliament) ಸೆಂಟ್ರಲ್ ವಿಸ್ತಾ (Central Vista) ದ ಉದ್ಘಾಟನಾ ಕಾರ್ಯಕ್ರಮ ಆರಂಭವಾಗಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ರಾಜದಂಡ ಪ್ರತಿಷ್ಠಾಪನೆ ಮಾಡಿದ್ದಾರೆ.

ಈ ರಾಜದಂಡವನ್ನು ಲೋಕಸಭೆಯ ಸ್ಪೀಕರ್ ಆಸನದ ಪಕ್ಕದಲ್ಲಿಯೇ ಅಳವಡಿಸಲಾಗಿದೆ. ಭಾರತಕ್ಕೆ ಅಧಿಕಾರ ಹಸ್ತಾಂತರ ಪ್ರತೀಕವಾಗಿದ್ದ ಸೆಂಗೊಲ್, 75 ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ವಿಶೇಷ ಮಾನ್ಯತೆ ಪಡೆದಿದೆ. ಸಂಸತ್ ಭವನ ಉದ್ಘಾಟನೆಗೆ ರಾಜ್ಯದ ಪುರೋಹಿತರ ನೇತೃತ್ವ ವಹಿಸಿದ್ದು, ಶೃಂಗೇರಿಯ ಶಾರದಾ ಪೀಠದ ಪುರೋಹಿತರಿಂದ ಬೆಳಗ್ಗೆ 7:30ರಿಂದಲೇ ಹೋಮ, ಪೂಜಾ ಕೈಂಕರ್ಯ ಆರಂಭವಾಗಿವೆ. ಪ್ರಧಾನಿ ಮೋದಿ ಸಮ್ಮುಖದಲ್ಲಿ ವಿಶೇಷ ಪೂಜೆ, ಹೋಮ-ಹವನ ನಡೆದಿದೆ. 2020ರಲ್ಲಿ ಅಡಿಗಲ್ಲು ಪೂಜೆಯನ್ನು ಪುರೋಹಿತರು ನೆರವೇರಿಸಿದ್ದಾರೆ.

ಕೊನೆಯ ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್, ನೆಹರೂ ಅವರೊಂದಿಗೆ ಯಾವ ರೀತಿ ಹಸ್ತಾಂತರ ಮಾಡಬೇಕು ಎಂಬುದರ ಬಗ್ಗೆ ಚರ್ಚಿಸುತ್ತಿದ್ದರು. ಈ ಸಂದರ್ಭದಲ್ಲಿ ಚೋಳರ ಇತಿಹಾಸವನ್ನು ತಿಳಿದಿದ್ದ ಭಾರತದ ಕೊನೆಯ ಗವರ್ನರ್ ಜನರಲ್ ಸಿ ರಾಜಗೋಪಾಲಚಾರಿ ಸೆಂಗೊಲ್ ನೀಡುವ ಮೂಲಕ ಹಸ್ತಾಂತರಿಸಬಹುದು ಎಂದು ಸಲಹೆ ನೀಡಿದ್ದರು. ಈ ಸಲಹೆ ನೆಹರೂ ಅವರಿಗೆ ಇಷ್ಟವಾಯಿತು. ಆಗ ತಮಿಳುನಾಡಿನ ಪ್ರಮುಖ ಮಠವಾದ ತಿರುವಾಡುತುರೈ ಅಧೀನಂ ಮಠವನ್ನು ಸಂಪರ್ಕಿಸಿ ಮಠದ ಶ್ರೀಗಳು ಇದರ ಜವಾಬ್ದಾರಿಯನ್ನು ತೆಗೆದುಕೊಂಡರು. ಮದ್ರಾಸಿನ ಆಭರಣ ವ್ಯಾಪಾರಿಯಾಗಿದ್ದ ವುಮ್ಮಿಡಿ ಬಂಗಾರು ಚೆಟ್ಟಿ ಅವರು ಸೆಂಗೋಲನ್ನು ತಯಾರಿಸಿದ್ದರು. ಇದು ಐಡಿ ಉದ್ದ ಹಾಗೂ ನ್ಯಾಯವನ್ನು ಸಂಕೇತಿಸುವ ನಂದಿ ಹೊಂದಿದೆ.

You may also like

Politics

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂ.ಬಿ. ಪಾಟೀಲ್ ಹೇಳಿದ್ದೇನು? ಯಾವಾಗ ಬಿಡುಗಡೆಯಾಗಲಿದೆ ಪಟ್ಟಿ?

ವಿಜಯಪುರ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿವೆ. ಈಗಾಗಲೇ ಕಾಂಗ್ರೆಸ್ ನ ಮೊದಲ
Politics

ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಕೊಪ್ಪಳ : ತಂದೆ- ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದಿದ್ದಾರೆ.ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ತಾಂಡಾದಲ್ಲಿ ಇಬ್ಬರು ಮಕ್ಕಳನ್ನು