Kornersite

Just In National Politics

PM Modi: ನೂತನ ಸಂಸತ್ ನಿರ್ಮಾಣಕ್ಕೆ ಶ್ರಮಿಸಿದವರಿಗೆ ಪ್ರಧಾನಿಯಿಂದ ಸನ್ಮಾನ!

ನವದೆಹಲಿ: ನೂತನ ಸಂಸತ್ ಭವನ ಕಟ್ಟಡ ಲೋಕಾರ್ಪಣೆಗೊಂಡಿದ್ದು, ನಿರ್ಮಾಣಕ್ಕಾಗಿ ಶ್ರಮಿಸಿದ ಕಾರ್ಮಿಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸನ್ಮಾನಿಸಿದರು.

ಸಾಂಪ್ರದಾಯಿಕ ಶಾಲು ಹೊದಿಸಿ, ಸ್ಮರಣಿಕೆ ನೀಡುವ ಮೂಲಕ ಕಾರ್ಮಿಕರನ್ನು ಪ್ರಧಾನಿ ಸನ್ಮಾನಿಸಿ ಗೌರವಿಸಿದರು. ಗೆ ಪ್ರಧಾನಿ ಮೋದಿಯವರು ಗೌರವ ಸಲ್ಲಿಸಿದರು. ಇದಕ್ಕೂ ಮೊದಲು ಪುರೋಹಿತರಿಂದ ಪಡೆದ ಐತಿಹಾಸಿಕ ಸೆಂಗೋಲ್ ನ್ನು ಲೋಕಸಭೆಯ ಸಭಾಂಗಣದಲ್ಲಿ ಸ್ಪೀಕರ್ ಕುರ್ಚಿಯ ಪಕ್ಕದಲ್ಲಿ ಪ್ರತಿಷ್ಠಾಪಿಸಿದರು. 1947 ರಂದು ಬ್ರಿಟಿಷ್ ಗುಲಾಮಗಿರಿ ಆಳ್ವಿಕೆಯಿಂದ ಮುಕ್ತಿ ಪಡೆದ ಭಾರತಕ್ಕೆ ಅಧಿಕಾರವನ್ನು ಹಸ್ತಾಂತರಿಸುವ ಸೂಚಕವಾಗಿ ಸಂಗೋಲ್’ನ್ನು ಭಾರತೀಯಕರಿಗೆ ಬ್ರಿಟೀಷರು ನೀಡಿದ್ದರು. ಮೊದಲ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರು ಅವರು ಬ್ರಿಟೀಷರಿಂದ ಈ ಸೆಂಗೋಲ್’ನ್ನು ಪಡೆದಿದ್ದರು.

ಸೆಂಗೋಲ್ ಆಡಳಿತಗಾರನು ಕಾನೂನಿನ ಅಡಿಯಲ್ಲಿರುತ್ತಾನೆ ಎಂಬುವುದೇ ಇದರ ಸಂಕೇತ. ಸೆಂಗೋಲ್‌ನ ಮಂಡಲವು ಶಿವನ ಪವಿತ್ರ ಗೂಳಿಯಾದ ನಂದಿಯ ಕೆತ್ತನೆಯಿಂದ ಒಳಗೊಂಡಿದೆ. ಚಿನ್ನದ ರಾಜದಂಡದ ಮೂಲವು ಚೋಳ ಸಾಮ್ರಾಜ್ಯದಲ್ಲಿ ಅದರ ಮೂಲ ಹೊಂದಿದೆ. ರಾಜನಿಂದ ಮತ್ತೊಬ್ಬ ರಾಜನಿಗೆ ಅಧಿಕಾರದ ವರ್ಗಾವಣೆಯು ನ್ಯಾಯದ ಸಂಕೇತವಾದ ನಂದಿಯ ಕೆತ್ತನೆ ಹೊಂದಿರುವ ಚಿನ್ನದ ಕೋಲು ಸೆಂಗೋಲ್ ಹಸ್ತಾಂತರಿಸುವ ಮೂಲಕ ಗುರುತಿಸಲ್ಪಟ್ಟಿದೆ. ಇಡೀ ದೇಶವೇ ಹೊಸ ಸಂಸತ್ ಲೋಕಾರ್ಪಣೆಗೆ ಸಾಕ್ಷಿಯಾಗಿದ್ದು, ಭಾರತ ಹೊಸ ಯುಗಕ್ಕೆ ಕಾಲಿಟ್ಟಂತಾಗಿದೆ.

You may also like

Politics

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂ.ಬಿ. ಪಾಟೀಲ್ ಹೇಳಿದ್ದೇನು? ಯಾವಾಗ ಬಿಡುಗಡೆಯಾಗಲಿದೆ ಪಟ್ಟಿ?

ವಿಜಯಪುರ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿವೆ. ಈಗಾಗಲೇ ಕಾಂಗ್ರೆಸ್ ನ ಮೊದಲ
Politics

ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಕೊಪ್ಪಳ : ತಂದೆ- ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದಿದ್ದಾರೆ.ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ತಾಂಡಾದಲ್ಲಿ ಇಬ್ಬರು ಮಕ್ಕಳನ್ನು