ಉತ್ತಮ ಫಾರ್ಮ್ ನಲ್ಲಿರುವ ಟೀಂ ಇಂಡಿಯಾ ಹಾಗೂ ಗುಜರಾತ್ ಟೈಟಾನ್ಸ್ (GT) ಆಟಗಾರ ಶುಭಮನ್ ಗಿಲ್ (Shubman Gill) ಈ ಬಾರಿ ವಿರಾಟ್ ಕೊಹ್ಲಿ (Virat Kohli) ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.
ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆರ್ ಸಿಬಿ ಕಾಡಿದ ಗಿಲ್, ಶತಕ ಬಾರಿಸಿ ಆರ್‌ಸಿಬಿ ತಂಡವನ್ನು ಪ್ಲೇ ಆಫ್‌ಗೆ ಬಾರದಂತೆ ತಡೆದರು. ಕ್ವಾಲಿಫೈಯರ್ 2ನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಗಿಲ್ ಮುಂಬಯಿ ಬೌಲರ್ ಗಳನ್ನು ಬೆಂಡೆತ್ತಿದರು. ಆರಂಭಿಕನಾಗಿ ಕಣಕ್ಕಿಳಿದ ಶುಭಮನ್ ಗಿಲ್ 60 ಎಸೆತಗಳಲ್ಲಿ 10 ಸಿಕ್ಸ್, 7 ಬೌಂಡರಿಗಳೊಂದಿಗೆ ಬರೋಬ್ಬರಿ 129 ರನ್ ಗಳಿಸಿದರು. ಈ ಮೂಲಕ 2023ರ ಐಪಿಎಲ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮ್ಯಾನ್ ಆಗಿದ್ದಾರೆ.
ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ 730 ರನ್ ಗಳಿಸಿ ಆರೆಂಜ್‌ಕ್ಯಾ ಪ್ ರೇಸ್‌ನಲ್ಲಿದ್ದರು. ಗಿಲ್ ಈ ಸೀಸನ್ ನಲ್ಲಿ 3 ಶತಕಗಳನ್ನ ಸಿಡಿಸುವ ಮೂಲಕ ಆರೆಂಜ್ ಕ್ಯಾಪ್ ರೇಸ್ ನಲ್ಲಿ ಮುಂದಿದ್ದಾರೆ. ವಿರಾಟ್ ಕೊಹ್ಲಿ 2016ರ ಐಪಿಎಲ್ ಒಂದೇ ಸೀಸನ್‌ನಲ್ಲಿ 4 ಭರ್ಜರಿ ಶತಕ, 7 ಅರ್ಧಶತಕಗಳೊಂದಿಗೆ 973 ರನ್ ಗಳಿಸಿದ್ದರು. ಇದು ಇಲ್ಲಿಯವರೆಗಿನ ದಾಖಲೆಯಾಗಿದೆ. 2016ರಲ್ಲಿ ಡೇವಿಡ್ ವಾರ್ನರ್ 848 ರನ್ ಗಳಿಸಿದ್ದರು. 2022ರ ಐಪಿಎಲ್ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್ 4 ಶತಕಗಳೊಂದಿಗೆ 863 ರನ್ ಗಳಿಸಿದ್ದರು.
2023ರ ಸೀಸನ್‌ನಲ್ಲಿ 16 ಪಂದ್ಯ 16 ಇನ್ನಿಂಗ್ಸ್‌ಗಳನ್ನಾಡಿರುವ ಶುಭಮನ್ ಗಿಲ್ 3 ಶತಕಗಳೊಂದಿಗೆ 851 ರನ್ ಗಳಿಸಿದ್ದಾರೆ. ಈ ಮೂಲಕ ಡೇವಿಡ್ ವಾರ್ನರ್ ದಾಖಲೆಯನ್ನ ಮುರಿದಿದ್ದು, ಜೋಸ್ ಬಟ್ಲರ್ ಹಾಗೂ ವಿರಾಟ್ ಕೊಹ್ಲಿ ಅವರ ಸಾರ್ವಕಾಲಿಕ ದಾಖಲೆಯ ಮುರಿಯುವ ಸನಿಹದಲ್ಲಿದ್ದಾರೆ.