ರಾಯಚೂರು: ಲಾರಿ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾದ (Collision) ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಲಿಂಗಸುಗೂರು ತಾಲೂಕಿನ ಆದಪೂರ ಗ್ರಾಮದ ಚನ್ನವೀರಪ್ಪಗೌಡ ಅವರು ಇಳಕಲ್ ಗೆ ಹೊರಟಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಲಿಂಗಸುಗೂರಿನ ಕಾಂಗ್ರೆಸ್ ಮುಖಂಡ (Congress leader) 65 ವರ್ಷದ ಚನ್ನವೀರಪ್ಪ ಗೌಡ ಪಾಗದ ಸಾವನ್ನಪ್ಪಿದ ನಾಯಕ. ಬಾಗಲಕೋಟೆಯ (Bagalkot) ಇಳಕಲ್ ಹತ್ತಿರದ ತುಂಬಾ ಕ್ರಾಸ್ ನಲ್ಲಿ ಈ ಅಪಘಾತ (Accident) ಸಂಭವಿಸಿದೆ.
ಎಪಿಎಂಸಿ ಮಾಜಿ ಅಧ್ಯಕ್ಷ ಚನ್ನವೀರಪ್ಪ ಗೌಡ ಪಾಗದ, ಲಿಂಗಸುಗೂರಿನ ಬನ್ನಿಗೋಳ ತಾಲೂಕ ಪಂಚಾಯತ್ ಗೆ 2 ಬಾರಿ ಆಯ್ಕೆಯಾಗಿದ್ದರು. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಚನ್ನವೀರಪ್ಪಗೌಡ ಅವರ ಕಾರು ಸಂಪೂರ್ಣವಾಗಿ ಹಾಳಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.