ದಾಂಪತ್ಯ ಜೀವನ ಚೆನ್ನಾಗಿರಲು ಲೈಂಗಿಕ ಜೀವನ ಚೆನ್ನಾಗಿರಬೇಕು. ಇಲ್ಲವಾದಲ್ಲಿ ಅನೇಕ ಸಂಬಂಧಗಳು ಮುರಿದು ಬೀಳುತ್ತವೆ. ನಿಮ್ಮ ಜೀವನ ಸಂಗಾತಿ ಜೊತೆ ಮುಕ್ತವಾಗಿ ಮಾತನಾಡಿ. ಹಲವರು ಲೈಂಗಿಕ ಜೀವನದ ಬಗ್ಗೆ, ಸಂಭೋಗದ ಬಗ್ಗೆ ಮಾತನಾಡಲು ನಾಚಿಕೊಳ್ತಾರೆ. ಇದ್ರಿಂದ ಮನಸ್ಥಾಪ ಹೆಚ್ಚಾಗುತ್ತದೆ. ಲೈಂಗಿಕತೆಯನ್ನು ಆನಂದಿಸಲು ಎರಡು ಪ್ರಮುಖ ಮಾರ್ಗಗಳಿವೆ. ಇದಲ್ಲದೆ ಕರೇಜಾ ತಂತ್ರವನ್ನು ಬಳಸಾಹುದು.
ಕರೇಜಾ ಎಂದರೇನು?
ಕಾಳಜಿಯುಳ್ಳ ಲೈಂಗಿಕ ಚಟುವಟಿಕೆಯನ್ನು ಕರೇಜಾ (kareeza) ಎಂದು ಕರೆಯುತ್ತಾರೆ. ಕರೇಜಾ ಎಂದರೆ ಇಟಾಲಿಯನ್ ಪದ ಕ್ಯಾರೆಝಾದಿಂದ ಬಂದಿದೆ. ಕರೇಜಾ ಎಂದರೆ ಮುದ್ದು, ಪ್ರೀತಿ (love) ಎಂದರ್ಥ. ಇತರ ಲೈಂಗಿಕ ಚಟುವಟಿಕೆಗಳಿಗಿಂತ ಕರೇಜಾ ಭಿನ್ನವಾಗಿದೆ. ಸಂಗಾತಿ ಜೊತೆ ಆರಾಮಾಗಿ ಇರೋದೇ ಇದರ ಉದ್ದೇಶ. ಕರೇಜಾ ದೈಹಿಕ ಬಯಕೆಗಿಂತ ಸಂಗಾತಿಯ ಆಧ್ಯಾತ್ಮಿಕ ಪ್ರೀತಿಗೆ ಪ್ರಾಮುಖ್ಯ ನೀಡುತ್ತದೆ. ಸಾಮಾನ್ಯ ಲೈಂಗಿಕ ಕ್ರಿಯೆಗಿಂತ ಕರೇಜಾ ಸ್ವಲ್ಪ ಭಿನ್ನ. ಇದ್ರಲ್ಲಿ ಯಾವುದೇ ಒತ್ತಡವಿರುವುದಿಲ್ಲ. ಸಂಭೋಗದ ವೇಳೆ ಪರಸ್ಪರ ಕಾಳಜಿ ಹಾಗೂ ಪ್ರೀತಿ ಹಂಚುವುದಾಗಿದೆ.
ಸೋ ನಿಮ್ಮ ಲೈಫ್ ಸಂಗಾತಿ ಜೊತೆ ಮುಕ್ತವಾಗಿ ಮಾತನಾಡಿ. ಮನಸ್ಥಾಪ ದೂರಮಾಡಿ. ಹ್ಯಾಪಿಯಾಗಿರಿ.