ಬೆಂಗಳೂರು : ಚಿನ್ನ ಹಾಗೂ ಬೆಳ್ಳಿ ಬೆಲೆಗಳು (Gold and Silver Prices) ದೇಶದಲ್ಲಿ ಮತ್ತಷ್ಟು ಇಳಿಕೆಯ ಹಾದಿ ಹಿಡಿದಿವೆ.
ಸಿಂಗಾಪುರದಲ್ಲಿ ಚಿನ್ನದ ಇಳಿಕೆ ಕಂಡಿದೆ. 22 ಗ್ರಾಮ್ ಚಿನ್ನದ ಬೆಲೆ ಅಲ್ಲಿ 818 ಸಿಂಗಾಪುರಿಯನ್ ಡಾಲರ್ಗೆ ಇಳಿದಿದೆ. ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ 50 ಸಾವಿರಕ್ಕಿಂತಲೂ ಕಡಿಮೆ ಇದೆ. ಅಮೆರಿಕ, ದುಬೈ ಬಳಿಕ ಸಿಂಗಾಪುರದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. ಉಳಿದ ಕಡೆ ಚಿನ್ನ ಮತ್ತು ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿದೆ. ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 55,550 ರೂ. ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 60,600 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 7,300 ರೂ. ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 55,600 ರೂ. ಆಗಿದೆ. ಬೆಳ್ಳಿ ಬೆಲೆ 100 ಗ್ರಾಂಗೆ 7,700 ರೂ. ಇದೆ.
ಜಾಗತಿಕವಾಗಿ ಅತಂತ್ರ ಆರ್ಥಿಕ ಸ್ಥಿತಿ ಇರುವುದರಿಂದ ಹೂಡಿಕೆದಾರರಲ್ಲಿ ಗೊಂದಲ ಮನೆಮಾಡಿದೆ.
ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 30ಕ್ಕೆ):
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,550 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,600 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 730 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,600 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,600 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 770 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
ಮಲೇಷ್ಯಾ: 2,850 ರಿಂಗಿಟ್ (51,183 ರುಪಾಯಿ)
ದುಬೈ: 2182.50 ಡಿರಾಮ್ (49,089 ರುಪಾಯಿ)
ಅಮೆರಿಕ: 595 ಡಾಲರ್ (49,146 ರುಪಾಯಿ)
ಸಿಂಗಾಪುರ: 818 ಸಿಂಗಾಪುರ್ ಡಾಲರ್ (49,928 ರುಪಾಯಿ)
ಕತಾರ್: 2,250 ಕತಾರಿ ರಿಯಾಲ್ (51,049 ರೂ)
ಓಮನ್: 238 ಒಮಾನಿ ರಿಯಾಲ್ (51,049 ರುಪಾಯಿ)
ಕುವೇತ್: 187 ಕುವೇತಿ ದಿನಾರ್ (50,212 ರುಪಾಯಿ)