Kornersite

Just In National

ಸಾಮೂಹಿಕ ವಿವಾಹ; ಗರ್ಭನಿರೋಧಕ ಮಾತ್ರ, ಕಾಂಡೋಮ್ ಗಿಫ್ಟ್ ನೀಡಿದ ಸರ್ಕಾರ

ಭೋಪಾಲ್ : ಮಧ್ಯಪ್ರದೇಶ ಸರ್ಕಾರವು ಸಾಮೂಹಿಕ ವಿವಾಹ ನೆರವೇರಿಸಿ, ವಧು-ವರರಿಗೆ ಕಾಂಡೋಮ್ ಹಾಗೂ ಗರ್ಭ ನಿರೋಧಕ ಮಾತ್ರೆ(Contraceptive Pills)ಗಳನ್ನು ಗಿಫ್ಟ್ ನೀಡಿರುವ ಸಂಗತಿ ಬೆಳಕಿಗೆ ಬಂದಿದೆ.

ಸಿಎಂ ಶಿವರಾಜ್ ಸಿಂಗ್ ಚವ್ಹಾಣ್ (Shivraj Singh Chouhan) ಅವರ ನೇತೃತ್ವದಲ್ಲಿ ಸಾಮೂಹಿಕ ವಿವಾಹ ನೆರವೇರಿದ್ದವು. ಕನ್ಯಾ ವಿವಾಹ/ನಿಕಾಹ್ ಯೋಜನೆ ಅಡಿಯಲ್ಲಿ ಆರ್ಥಿಕ ದುರ್ಬಲ ವರ್ಗದ ಮಹಿಳೆಯರಿಗಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ (Wedding Event)ವನ್ನು ಸರ್ಕಾರ ನೆರವೇರಿಸಿತ್ತು. ಈ ಸಂದರ್ಭದಲ್ಲಿ ಗಿಫ್ಟ್ ನೀಡಿದ್ದ ಕಿಟ್ ನಲ್ಲಿ ಕಾಂಡೋಮ್ ಹಾಗೂ ಗರ್ಭನಿರೋಧಕ ಮಾತ್ರೆಗಳೂ ಇತ್ತು.

ಆದರೆ ಈ ಬಗ್ಗೆ ಕೇಳಿದಾಗ ಜಿಲ್ಲಾ ಹಿರಿಯ ಅಧಿಕಾರಿ ಭೂರಸಿಂಗ್ ರಾವತ್, ಕುಟುಂಬ ಯೋಜನೆಗೆ ಸಂಬಂಧಿಸಿದ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಆರೋಗ್ಯಾಧಿಕಾರಿಗಳು ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳನ್ನ ವಿತರಿಸಿರಬಹುದು ಎಂದು ಹೇಳಿದ್ದಾರೆ.
2006ರ ಏಪ್ರಿಲ್‌ನಲ್ಲಿ ಮಧ್ಯಪ್ರದೇಶ ಸರ್ಕಾರವು ಕನ್ಯಾ ವಿವಾಹ/ನಿಹಾಕ್ ಯೋಜನೆಯನ್ನ ಆರಂಭಿಸಿತು. ಆರ್ಥಿಕ ದುರ್ಬಲ ವರ್ಗದ ಮಹಿಳೆಯರ ವಿವಾಹಗಳಿಗೆ ಹಣಕಾಸು ನೆರವು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.

You may also like

National

ರಾಮಲೀಲಾ ಮೈದಾನದಲ್ಲಿ ಜಮಾಯಿಸುತ್ತಿರುವ ರೈತರು

ನವದೆಹಲಿ : ದೇಶದ ಬೇರೆ ಬೇರೆ ರಾಜ್ಯಗಳಿಂದ ರೈತರು ಇಂದು ದೆಹಲಿಯಲ್ಲಿ ಜಮಾಯಿಸುತ್ತಿದ್ದಾರೆ. ವಿವಿಧ ರೈತ ಸಂಘಟನೆಗಳ ಯುನೈಟೆಡ್ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕೃಷಿ ಉತ್ಪನ್ನಗಳ ಕನಿಷ್ಠ
Just In Sports

ಹೋರಾಡಿ ಸೋತ ರಾಜಸ್ಥಾನ್ (Rajasthan) – ಸತತ ಎರಡನೇ ಜಯ ದಾಖಲಿಸಿದ ಪಂಜಾಬ್ (Punjab)

Guwahati: ನಾಯಕ ಶಿಖರ್‌ ಧವನ್‌ (Shikhar Dhawan), ಪ್ರಭ್‌ಸಿಮ್ರಾನ್‌ ಸಿಂಗ್‌ (Prabhsimran Singh) ಬ್ಯಾಟಿಂಗ್ ಹಾಗೂ ನಾಥನ್ ಎಲ್ಲಿಸ್ ಬೌಲಿಂಗ್‌ ದಾಳಿಯಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ