ಭಾರತೀಯ ನೌಕಾಪಡೆಯು ಅಗ್ನಿಪಥ ಯೋಜನೆಯ ಅಗ್ನಿವೀರರ ಭರ್ತಿಗೆ ಅಧಿಸೂಚನೆಯನ್ನು ಇತ್ತೀಚೆಗಷ್ಟೇ ಹೊರಡಿಸಲಾಗಿತ್ತು. ಸದ್ಯ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆನ್‌ಲೈನ್ ಲಿಂಕ್ ಬಿಡುಗಡೆ ಮಾಡಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ನೇಮಕಾತಿಯಲ್ಲಿ ಅರ್ಹತೆ ಪಡೆಯುವವರನ್ನು ನವೆಂಬರ್ ತಿಂಗಳ ಅಂತ್ಯಕ್ಕೆ ಹುದ್ದೆಗೆ ನಿಯೋಜನೆ ಮಾಡಲಾಗುತ್ತದೆ.
ನೌಕಾಪಡೆಯು ಪಿಯುಸಿ, ಎಸ್ಸೆಸ್ಸೆಲ್ಸಿ ಪಾಸಾದವರನ್ನು ಪ್ರತ್ಯೇಕವಾಗಿ ನೇಮಕ ಮಾಡಿಕೊಳ್ಳಲಾಗುವುದು. ಸೀನಿಯರ್ ಸೆಕೆಂಡರಿ ಅರ್ಹತೆಯುಳ್ಳವರಿಗೆ ಒಟ್ಟು 1365 ಹುದ್ದೆಗಳು ಇವೆ. ಅವಿವಾಹಿತ ಪುರುಷ, ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ರಿಜಿಸ್ಟ್ರೇಷನ್ ಪಡೆಯಬಹುದು. ಸೀನಿಯರ್ ಸೆಕೆಂಡರಿ ಅರ್ಹತೆಯುಳ್ಳವರಿಗೆ ಒಟ್ಟು 1365 ಹುದ್ದೆಗಳು ಇವೆ. ಅವಿವಾಹಿತ ಪುರುಷ, ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ರಿಜಿಸ್ಟ್ರೇಷನ್ ಪಡೆಯಬಹುದು.
10+2 ವಿದ್ಯಾರ್ಹತೆಯನ್ನು ಕಡ್ಡಾಯವಾಗಿ ಗಣಿತ ಮತ್ತು ಭೌತಶಾಸ್ತ್ರದಲ್ಲಿ ಓದಿರಬೇಕು. ಜತೆಗೆ ಕೆಮಿಸ್ಟ್ರಿ / ಬಯೋಲಜಿ / ಕಂಪ್ಯೂಟರ್ ಸೈನ್ಸ್ ಯಾವುದಾದರು ವಿಷಯ ಜತೆಯಲ್ಲಿ ಓದಿರಬೇಕು. 1 ನವೆಂಬರ್ 2002 – 30 ಏಪ್ರಿಲ್ 2006 ರ ನಡುವೆ ಜನಿಸಿರಬೇಕು. ಪುರುಷ ಅಭ್ಯರ್ಥಿಗಳ ಎತ್ತರ ಕನಿಷ್ಠ 157 ಸೆಂ.ಮೀ ಇರಬೇಕು. ಮಹಿಳಾ ಅಭ್ಯರ್ಥಿಗಳ ಎತ್ತರ ಕನಿಷ್ಠ 152 ಸೆಂ.ಮೀ ಇರಬೇಕು.