ಅಹಮದಾಬಾದ್ : ಗುಜರಾತ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜಯ ಸಾಧಿಸಿ, ಐದನೇ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿದೆ. ಈ ಪಂದ್ಯದಲ್ಲಿ ಜಡೇಜಾ ಆಟ ಅದ್ಭುತವಾಗಿತ್ತು. ಕೊನೆಯ ಓವರ್ ನಲ್ಲಿ ನಡೆಸಿದ ದಿಟ್ಟ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್-16ರ ಚಾಂಪಿಯನ್ ಆಗಿದೆ. ಸದ್ಯ ಜಡೇಜಾ ಕುಟುಂಬದ ಬಗ್ಗೆ ಇಡೀ ದೇಶದ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಜಡೇಜಾ ಪತ್ನಿಯ ಸಂಭ್ರಮಾಚರಣೆಯ ಫೋಟೋ,ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಚೆನ್ನೈ ಗೆಲುವು ಸಾಧಿಸುತ್ತಿದ್ದಂತೆ ಫ್ಯಾನ್ಸ್ ಕುಣಿದು ಕುಪ್ಪಳಿಸುತ್ತಿದ್ದರೆ, ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಖುಷಿಯಿಂದಲೇ ಕಣ್ಣೀರಿಟ್ಟಿದ್ದಾರೆ.
ರಿವಾಬಾ ಜಡೇಜಾ ಕಣ್ಣೀರುಡುತ್ತಲೇ ಮೈದಾನದೊಳಗೆ ಆಗಮಿಸುತ್ತಿದ್ದಂತೆ ಜಡೇಜಾ ತಬ್ಬಿಕೊಳ್ಳಲು ಮುಂದಾಗುತ್ತಾರೆ. ಈ ಸಂದರ್ಭದಲ್ಲಿ ಪತ್ನಿ ಜಡೇಜಾ ಕಾಲಿ ಬಿದ್ದು ನಮಸ್ಕರಿಸುತ್ತಾರೆ. ಓಡಿ ಬಂದ ಮಗಳು ಜಡೇಜಾ ಅವರನ್ನು ಅಪ್ಪಿಕೊಂಡು ಸಂಭ್ರಮಿಸಿದ್ದಾಳೆ. ರಿವಾಬಾ ಜಡೇಜಾ ಕಾಲಿಗೆ ಬಿದ್ದು ನಮಸ್ಕರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಜಡೇಜಾ ಪತ್ನಿ ರಿವಾಬಾ ಕಾಲಿ ಬಿದ್ದು ಆಶೀರ್ವಾದ ಪಡೆಯುತ್ತಿರುವ ವಿಡಿಯೋ ನೆಟ್ಟಿಗರ ಮನಗೆದ್ದಿದೆ. ಈ ಬಗ್ಗೆ ಮೆಚ್ಚುಗೆ ಮಾತುಗಳು ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ. ‘ಇದು ನಮ್ಮ ದೇಶದ ಸಂಸ್ಕೃತಿ’ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಜಡೇಜಾ ಪತ್ನಿ ಗುಜರಾತ್ ನ ಜಾಮ್ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿಯಾಗಿದ್ದಾರೆ.