ಹಾವುಗಳನ್ನು ನೋಡಿದರೆ ಕೆಲವರು ಮಾರುದ್ದ ದೂರ ಜಿಗಿಯುತ್ತಾರೆ. ಆದರೆ, ಇನ್ನೂ ಹಲವರು ಅವುಗಳೊಂದಿಗೆ ಏನೇನೋ ಆಡಲು ಹೋಗಿ ಫಜೀತಿಗೆ ಒಳಗಾಗುತ್ತಿರುತ್ತಾರೆ. ಇಲ್ಲಿ ಇಂತಹುದೇ ಘಟನೆಯೊಂದು ನಡೆದಿದೆ.
ಪಾರ್ಕ್ ಗೆ ತೆರಳಿದ್ದ ಯುವತಿ, ಇಬ್ಬರು ಸಿಬ್ಬಂದಿ ಹಾವು ಹಿಡಿದಿರುವುದನ್ನು ನೋಡಿ ಆ ಹಾವಿಗೆ ಕಿಸ್ ಕೊಡಲು ಹೋಗಿದ್ದಾಳೆ. ಆಗ ಏಕಾಏಕಿ ನುಗ್ಗಿದ ಹಾವು ಯುವತಿಯ ಮೂಗು ಮತ್ತು ಬಾಯಿಗೆ ಕಚ್ಚಿದೆ. ಆ ಸಂದರ್ಭದಲ್ಲಿ ಯುವತಿ ಕಿರುಚಾಡಿದ್ದಾಳೆ. ಹಾವು ಕಚ್ಚಲು ಆರಂಭಿಸುತ್ತಿದ್ದಂತೆ ಯುವತಿ ಕಿರುಚಲು ಆರಂಭಿಸಿದ್ದಾಳೆ. ಪಕ್ಕದಲ್ಲಿದ್ದ ಮಹಿಳೆಯೂ ಸ್ನೇಹಿತೆಯನ್ನು ರಕ್ಷಿಸುವಂತೆ ಕೂಗಿದ್ದಾಳೆ. ಇದನ್ನು ಕಂಡ ಹಾವನ್ನು ಹಿಡಿದ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾಗಿ ಹಾವಿನ ದಾಳಿಗೆ ಒಳಗಾದ ಮಹಿಳೆಯನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.
ಹಾವು ಯಾವಾಗಲೂ ಆತ್ಮರಕ್ಷಣೆಯ ಪ್ರಜ್ಞೆ ಹೊಂದಿವೆ. ಅವು ತಾವಾಗಿಯೇ ದಾಳಿ ಮಾಡುವುದು ಕಡಿಮೆ. ಆದರೆ, ಅವುಗಳ ತಂಟೆಗೆ ಹೋದರೆ, ದಾಳಿ ಮಾಡಿಯೇ ಬಿಡುತ್ತವೆ. ಹಾವು ಸೇರಿದಂತೆ ಸರೀಸೃಪಗಳು ಮತ್ತು ಪ್ರಾಣಿಗಳ ಬಗ್ಗೆ ಯಾವಾಗಲೂ ಜಾಗರೂಕರಾಗಿರಿ.