ಮುಂಗಾರು ಆರಂಭಕ್ಕೂ ಮುನ್ನವೇ ರಾಜ್ಯದಲ್ಲಿ (Karnataka) ವರುಣಾರ್ಭಟ (Rain) ಹೆಚ್ಚಾಗಿದೆ. ಮಂಗಳವಾರ ತಡರಾತ್ರಿ ಮಳೆರಾಯ ಅಬ್ಬರಿಸಿದ್ದು ಬೆಂಗಳೂರಿನ (Bengaluru) ಹಲವೆಡೆ ನಾನಾ ಅವಾಂತರ ಸೃಷ್ಟಿಯಾಗಿದೆ.
ಬಸವನಗುಡಿಯಲ್ಲಿ ವಿದ್ಯುತ್ ಕಂಬ, ಮರವೊಂದು ಧರೆಗುರುಳಿ 3 ವಾಹನಗಳು ಹಾನಿಯಾಗಿವೆ. ಮರ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಮಲನಗರದಲ್ಲಿ ಮರಬಿದ್ದು ಹಲವು ಅಂಗಡಿ ಮುಂಗಟ್ಟು ಜಖಂ ಆಗಿವೆ ಎಂದು ತಿಳಿದು ಬಂದಿದೆ. ಔಟರ್‌ರಿಂಗ್ ರೋಡ್‌ನಲ್ಲಿ ರಸ್ತೆಯ ಮೇಲೆ ನೀರು ನಿಂತು ವಾಹನ ಸವಾರರು ಪರದಾಡಿದ್ದಾರೆ. ಹನೂರಿನ ಗೌಡನದೊಡ್ಡಿಯಲ್ಲಿ ಗಾಳಿಮಳೆಗೆ ಕೊಟ್ಟಿಗೆಯ ಮೇಲ್ಛಾವಣಿಗಳು ಹಾರಿ ಹೋಗಿವೆ. ಅಪಾರ ಬೆಳೆ ಹಾನಿಯಾಗಿವೆ.
ಬುಧವಾರ ರಾತ್ರಿ ಮತ್ತು ಗುರುವಾರ ರಾಜ್ಯಾದ್ಯಂತ ವ್ಯಾಪಕ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದ್ದು, ನಗರದಲ್ಲಿ 2 ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.