ಬೆಂಗಳೂರು: ಕಾಂಗ್ರೆಸ್ (Congress) ಘೋಷಿಸಿದ್ದ ಗ್ಯಾರಂಟಿಗಳನ್ನು ಈಡೇರಿಸಲು ಈಗ ಮುಂದಾಗಿದೆ. ರಾಜ್ಯದ ಎಲ್ಲಾ ಹೆಣ್ಮಕ್ಕಳಿಗೂ ಷರತ್ತು ರಹಿತವಾಗಿ ಕೆಎಸ್‌ಆರ್‌ಟಿಸಿ (KSRTC) ಮತ್ತು ಬಿಎಂಟಿಸಿಯ (BMTC) ಸಾಮಾನ್ಯ ಬಸ್ ಗಳಲ್ಲಿ ಸಂಚಾರಕ್ಕೆ ಮುಕ್ತ ಅವಕಾಶ ನೀಡುವ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿದ್ದಾರೆ.
ಆದರೆ, ಕೆಲವು ಮಹಿಳೆಯರು ಈ ಅವಕಾಶದಿಂದ ವಂಚಿತರಾಗಬಹುದು ಎನ್ನಲಾಗುತ್ತಿದೆ. ಆದರೆ, ಸಚಿವ ರಾಮಲಿಂಗಾ ರೆಡ್ಡಿ, ಯಾವ ಕಂಡೀಷನ್ಸ್, ಗೈಡ್‌ಲೈನ್ಸ್ ಇಲ್ಲ. ಕೆಲಸಕ್ಕೆ ಹೋಗೋರು, ಕೆಲಸಕ್ಕೆ ಹೋಗದೇ ಇರುವವರು, ಎಪಿಎಲ್, ಬಿಪಿಎಲ್ ಎಂಬ ತಾರತಮ್ಯ ಇಲ್ಲ. ಮಹಿಳೆಯರು ರಾಜ್ಯಾದ್ಯಂತ ಸಂಚರಿಸಬಹುದು ಎಂದು ಹೇಳಿದ್ದಾರೆ.
ನಿತ್ಯ ಸರ್ಕಾರಿ ಬಸ್‌ಗಳಲ್ಲಿ ಅಂದಾಜು 85 ಲಕ್ಷ ಮಂದಿ ಸಂಚರಿಸುತ್ತಾರೆ. ಮಹಿಳೆಯರು ಅಂದಾಜು 43 ಲಕ್ಷದಷ್ಟು ಜನ ಸಂಚರಿಸುತ್ತಾರೆ. ಆದರೆ, ಉಚಿತವಾದ ನಂತರ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಬಹುದು. ಹೀಗಾಗಿ ಎಲ್ಲ ಜಿಲ್ಲೆಗಳಲ್ಲಿ ಪ್ರಯಾಣಿಸುತ್ತಿರುವವರ ಅಂಕಿ-ಅಂಶ ವಿವರವನ್ನು ನೀಡಲಾಗಿದೆ. ಸಾರಿಗೆ ನಿಗಮದಲ್ಲಿ ತೈಲಗಳಿಗೆ ಆಗುವ ವೆಚ್ಚಗಳ ಮಾಹಿತಿ, ಸಿಬ್ಬಂದಿಯ ವೇತನ ವೆಚ್ಚ ಹಾಗೂ ಆಗುವ ನಷ್ಟದ ಕುರಿತು ಸಚಿವರಿಗೆ ವಿವರವಾಗಿ ತಿಳಿಸಲಾಗಿದೆ.