ಅನೈತಿಕ ಸಂಬಂಧ ಬಯಲಾದ ಹಿನ್ನೆಲೆಯಲ್ಲಿ ಇಬ್ಬರು ವಿವಾಹಿತರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾಮದಲ್ಲಿ ನಡೆದಿದೆ.
35 ವರ್ಷದ ಪೀರಸಾಬ್ ಹಾಗೂ 30 ವರ್ಷದ ಶಾರವ್ವ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಪೀರಸಾಬ ಹಾಗೂ ಶಾರವ್ವಳ ಮಧ್ಯೆ ಹಲವು ವರ್ಷಗಳಿಂದಲೂ ಅನೈತಿಕ ಸಂಬಂಧ ಇತ್ತು. ಪೀರಸಾಬ ಚಾಲಕ ವೃತ್ತಿ ಮಾಡಿಕೊಂಡು, ಮದುವೆಯಾಗಿ ತನ್ನ ಸಂಸಾರ ನೋಡಿಕೊಂಡು ಇದ್ದ. ಆದರೆ, ಇವರಿಬ್ಬರ ಅನೈತಿಕ ಸಂಬಂಧ ಪೀರಸಾಬನ ಹೆಂಡತಿಗೆ ತಿಳಿದಿದೆ.
ಹೀಗಾಗಿ ಆತನ ಹೆಂಡತಿ ಶಾರವ್ವಳೊಂದಿಗೆ ಜಗಳವಾಡಿದ್ದಾಳೆ. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಸಂಧಾನ ಮಾಡಿದ್ದರು. ಆದರೆ, ಘಠನೆ ನಡೆದ ರಾತ್ರಿ ವೇಳೆ ಪೀರಸಾಬ ಹಾಗೂ ಶಾರವ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.