ಬೆಂಗಳೂರು : ಕಾಂಗ್ರೆಸ್ ಪಕ್ಷವು ತಾನು ಘೋಷಿಸಿದಂತೆ ಗೃಹಜ್ಯೋತಿ (Gruha Jyoti) ಯೋಜನೆಯ ಭಾಗವಾಗಿ 200 ಯೂನಿಟ್ (200 Unit Electricity) ವರೆಗೆ ವಿದ್ಯುತ್ ಉಚಿತವಾಗಿ ಆಗಷ್ಟ್ ತಿಂಗಳಿಂದ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಗೃಹಜ್ಯೋತಿ ಯೋಜನೆಗೆ ವಾರ್ಷಿಕ ಸರಾಸರಿಯ ಮಾನದಂಡವಿದೆ. 12 ತಿಂಗಳ ಸರಾಸರಿ ಪಡೆದುಕೊಂಡು ಅದರ ಮೇಲೆ ಶೇ. 10 ರಷ್ಟು ವಿದ್ಯುತ್ ಉಚಿತವಾಗಿ ನೀಡಲಾಗುವುದು. 12 ತಿಂಗಳ ಸರಾಸರಿ ವಿದ್ಯುತ್ ಬಳಕೆ ಆಧರಿಸಿ, ಅದರ ಮೇಲೆ ಶೇ. 10 ರಷ್ಟು ವಿದ್ಯುತ್ ಉಚಿತವಾಗಿ ಕೊಡಲಾಗುವುದು. 70 ಯೂನಿಟ್ ಬಳಸುವವರು ಅದಕ್ಕೆ ಶೇ. 10 (ಅಂದರೆ ಒಟ್ಟು 80%) ಬಳಕೆ ಮಾಡಬಹುದು. ಕಳೆದ ವರ್ಷ ಸರಾಸರಿ ತಿಂಗಳಿಗೆ 100 ಯೂನಿಟ್ ಬಳಸಿದ್ದವರು ಈಗ 110 ಯೂನಿಟ್ ಬಳಸಿದರೆ ಮಾತ್ರ ವಿದ್ಯುತ್ ಉಚಿತ ಸಿಗುತ್ತದೆ. ಉಚಿತ ಘೋಷಣೆಗಿಂತ ಹೆಚ್ಚು ಯೂನಿಟ್ ಬಳಸಿದರೆ, ಹೀಗೆ 200 ಯೂನಿಟ್ ವರೆಗೆ ವಿದ್ಯುತ್ ಬಳಸುವವರು ಬಿಲ್ ಕಟ್ಟುವಂತಿಲ್ಲ. ಉಚಿತ ಎಂದು ಬೇಕಾಬಿಟ್ಟಿಯಾಗಿ ಬಳಸುವಂತಿಲ್ಲ.
ಜು.1 ರಿಂದ ಆಗಸ್ಟ್ ವರೆಗಿನ ಖರ್ಚಿಗೆ ಇದು ಲೆಕ್ಕ. ಜುಲೈನಿಂದ ಮಾಡಿರುವ ಖರ್ಚಿನ ಬಿಲ್ ಆಗಸ್ಟ್‌ನಲ್ಲಿ ಬರಲಿದೆ. ಜುಲೈವರೆಗೆ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡವರಿಗೆ ಸಮಯ ನೀಡಲಾಗಿದೆ. ಹಳೇ ವಿದ್ಯುತ್ ಬಾಕಿಯನ್ನು ಗ್ರಾಹಕರೇ ಪಾವತಿಸಬೇಕು. ಆಗಷ್ಟ್ ನಿಂದ ಬರುವ ಬಿಲ್‌ನ್ನು ಜನರು ಕಟ್ಟುವ ಅಗತ್ಯವಿಲ್ಲ ಎಂದು ಸಿಎಂ ಹೇಳಿದ್ದಾರೆ.