ಟ್ರಾಫಿಕ್ ಜಂಕ್ಷನ್ಗಳಲ್ಲಿ ಪೊಲೀಸ್ ಸಿಬ್ಬಂದಿಯಿಲ್ಲ ಎಂದು ನಿಯಮ ಉಲ್ಲಂಘಿಸಿದರೂ ದಂಡ ಬೀಳುವುದು ಗ್ಯಾರಂಟಿ ಎಂಬುವುದು ಎಲ್ಲರಿಗೂ ಗೊತ್ತಿದ್ದರೂ ತಪ್ಪು ಮಾಡುತ್ತಿರುತ್ತಾರೆ. ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ಮೂಲಕ ಸದ್ಯ ಈ ಹೊಸ ಕಾರ್ಯಾಚರಣೆ ನಡೆಯುತ್ತಿದೆ. ಪ್ರತಿ ದಿನ 50 ಜಂಕ್ಷನ್ಗಳಲ್ಲಿ ಬರೋಬ್ಬರಿ 25 ಸಾವಿರ ಕೇಸ್ ದಾಖಲಾಗುತ್ತಿವೆ.
ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ನಂಬರ್ ಸಮೇತ ಪೋಟೋ ಕ್ಲಿಕ್ ಮಾಡಿ, ಸಂದೇಶ ರವಾನೆಯಾಗಲಿದೆ. ಬೆಂಗಳೂರು ನಗರದ ಪ್ರಮುಖ ಜಂಕ್ಷನ್ ಗಳಲ್ಲಿ ಮಾತ್ರ 230 ಕ್ಯಾಮೆರಾ ಬಳಕೆಯಲ್ಲಿವೆ. ಸಿಲಿಕಾನ್ ಸಿಟಿಯಲ್ಲಿ ಕೇವಲ 5 ತಿಂಗಳಲ್ಲಿ ಬರೊಬ್ಬರಿ 24 ಲಕ್ಷ ಕೇಸ್ ದಾಖಲಾಗಿವೆ. ಅಂದರೆ, ಸರಾಸರಿ ದಿನವೊಂದಕ್ಕೆ 25 ಸಾವಿರ ಸಂಚಾರಿ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿವೆ.
ಆಧುನಿಕ ಟೆಕ್ನಾಲಜಿ ಬಳಸಿ ಸಂಚಾರಿ ಪೊಲೀಸರು ಕೇಸ್ ದಾಖಲಿಸಲಾಗುತ್ತಿದೆ. ಹೆಚ್ಚುವರಿಯಾಗಿ 100 ಜಂಕ್ಷನ್ಗಳಲ್ಲಿ ಕ್ಯಾಮೆರಾ ಬಳಕೆ ಮಾಡಲು ಸಂಚಾರಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ.