Mumbai: ಇನ್ಮುಂದೆ ದೇವಸ್ಥಾನಕ್ಕೆ)temple) ಬೇಕಾಬಿಟ್ಟಿ ಉಡುಪು ಧರಿಸುವಂತಿಲ್ಲ. ಕಾರಣ 18 ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ(dress code) ಜಾರಿಗೊಳಿಸಿದ್ದಾರೆ. ಮಹಾರಾಷ್ಟ್ರದ(maharastra)ಮಂದಿರ ಮಹಾ ಸಂಘ ಹಾಗೂ ಹಿಂದೂ ಜನಜಾಗೃತಿ ಸಂಘಟನೆ ಈ ಮಹತ್ವದ ಆದೇಶ ಹೊರಡಿಸಿದೆ. ಇನ್ನು ಮುಂದೆ ಮಹಾರಾಷ್ಟ್ರದ 18 ದೇವಸ್ಥಾನಗಳಲ್ಲಿ ಹರಿದ ಫ್ಯಾಶನ್ ಜೀನ್ಸ್, ಸ್ಕರ್ಟ್, ಶಾರ್ಟ್ ಹಾಕಿ ಪ್ರವೇಶಿಸುವಂತಿಲ್ಲ. ಈ ರೀತಿಯ ಉಡುಪುಗಳಿಗೆ ನಿಷೇಧ ಹೇರಲಾಗಿದೆ.
ಮಹಾರಾಷ್ಟ್ರದ ಮಂದಿರ ಮಹಾ ಸಂಘ ಹಾಗೂ ಹಿಂದೂ ಜನಜಾಗೃತಿ ಘಟಕ ಜಂಟಿಯಾಗಿ ಮಹತ್ವದ ಸಭೆ ನಡೆಸಿ ಈ ನಿರ್ಧಾರವನ್ನು ಕೈಗೊಂಡಿದೆ. ಇದೇ ವೇಳೆ ಶೀಘ್ರದಲ್ಲಿ ಸರ್ಕಾರದ ಅಧೀನದಲ್ಲಿರುವ ದೇವಸ್ಥಾನಗಳಾದ ಶಿರಡಿ ಸೇರಿದಂತೆ ಇತರ ಪ್ರಸಿದ್ದ ಮಂದಿರಗಳಲ್ಲೂ ಡ್ರೇಸ್ ಕೋಡ್ ಜಾರಿ ಮಾಡುವಂತೆ ಮನವಿ ಮಾಡಿದೆ.
ನಾಗ್ಪುರದ ಕೆಲವು ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ ಹದಿನೆಂಟು ಮಂದಿರಗಳಲ್ಲಿ ಇದೀಗ ಡ್ರೆಸ್ ಕೋಡ್ ಜಾರಿಯಾಗುತ್ತಿದೆ.