Kornersite

Crime Just In National

ಸಮುದ್ರದ ಆಳದಲ್ಲಿ 20 ಕೋಟಿ ರೂ. ಮೌಲ್ಯದ ಚಿನ್ನ ಪತ್ತೆ; ಅಧಿಕಾರಿಗಳೇ ಶಾಕ್!

ಸುಮುದ್ರದ ಆಳದಲ್ಲಿ 20 ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನದ ಬಿಸ್ಕೇಟ್ ಕಂಡು ಬಂದಿರುವ ಘಟನೆ ತಮಿಳುನಾಡಿನ (Tamil Nadu) ರಾಮೇಶ್ವರಂನಲ್ಲಿ ಬೆಳಕಿಗೆ ಬಂದಿದೆ.

ಸದ್ಯ ಇದನ್ನು ಹೊರ ತೆಗೆಯುವಲ್ಲಿ ಅಧಿಕಾರಿಗಳು ಕೂಡ ಯಶಸ್ವಿಯಾಗಿದ್ದಾರೆ. ರಾಮೇಶ್ವರಂ ಮಂಟಪ ಪ್ರದೇಶದಿಂದ ಸಮುದ್ರ ಮಾರ್ಗವಾಗಿ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು. ಅಧಿಕಾರಿಗಳಿಗೆ ಅಪರಿಚಿತ ದೋಣಿ ಹೋಗುತ್ತಿರುವುದು ಕೂಡ ಗನಕ್ಕೆ ಬಂದಿತ್ತು. ಖಚಿತ ಮಾಹಿತಿ ಪಡೆದ ಭಾರತೀಯ ಕೋಸ್ಟ್ ಗಾರ್ಡ್ (India Coast Guard) ಮತ್ತು ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (Revenue Intelligence) ಜಂಟಿಯಾಗಿ ದಾಳಿ ನಡೆಸಿತ್ತು. ದೋಣಿಯಲ್ಲಿದ್ದ ವ್ಯಕ್ತಿಗಳು ತಮ್ಮಲ್ಲಿದ್ದ ಚಿನ್ನ ಇದ್ದ ಬಾಕ್ಸ್ ನ್ನು ಬಾಕ್ಸ್ ನ್ನು ಸಮುದ್ರಕ್ಕೆ ಎಸೆದಿದ್ದರು. ಅಧಿಕಾರಿಗಳು ದೋಣಿಯಲ್ಲಿದ್ದವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಹಿರಂಗವಾಗಿದೆ.

ಶೋಧ ಕಾರ್ಯ ನಡೆದ 2ನೇ ದಿನ ಸಮುದ್ರದಲ್ಲಿ ಎಸೆಯಲಾಗಿದ್ದ ಬಾಕ್ಸ್ ಪತ್ತೆಯಾಯಿತು. ಸ್ಕೂಬಾ ಡೈವರ್ಸ್ಗಳು ಬಾಕ್ಸ್ನ್ನು ಮೇಲೆತ್ತಿದರು. ಅದರಲ್ಲಿ 20 ಕೋಟಿಗೂ ಅಧಿಕ ಮೌಲ್ಯದ ಗೋಲ್ಡ್‌ ಬಿಸ್ಕೆಟ್‌ ನೋಡಿ ಅಧಿಕಾರಿಗಳು ಶಾಕ್ ಆಗಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Crime

ಬೈಕ್ ನಲ್ಲಿಯೇ ಸಹೋದರಿಯ ಶವ ಸಾಗಿಸಿದ ಅಣ್ಣ!

ನವದೆಹಲಿ : ಆಂಬುಲೆನ್ಸ್ ಬರುವುದಕ್ಕೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಸಹೋದರಿಯ ಮೃತ ದೇಹವನ್ನು ಬೈಕ್ ನಲ್ಲಿಯೇ ತೆಗೆದುಕೊಂಡು ಹೋಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕೌಶಾಂಬಿಯಲ್ಲಿ