Kornersite

International Just In

ಹುಟ್ಟಿದ ಮೂರೇ ದಿನದಲ್ಲಿ ಅಚ್ಚರಿ ಮೂಡಿಸಿದ ನವಜಾತ ಶಿಶು!

ನವಜಾತ ಶಿಶು ಹುಟ್ಟಿದ ಎರಡ್ಮೂರು ತಿಂಗಳ ನಂತರ ತಲೆ ಎತ್ತಲು ಕಲಿಯುತ್ತವೆ ಎನ್ನುತ್ತಾರೆ. ಆದರೆ, ಇಲ್ಲೊಂದು ನವಜಾತ ಶಿಶು (Newborn Baby) ಹುಟ್ಟಿದ ಮೂರೇ ದಿನದ ನಂತರ ತೆವಳುತ್ತ, ತಲೆ ಎತ್ತಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.

ಹೊಸ ತಾಯಿಯಾದ ಸಮಂತಾ ಎಲಿಜಬೆತ್ ತನ್ನ ಮಗು ಜನಿಸಿದ ಮೂರು ದಿನಗಳ ನಂತರ ತೆವಳಲು ಮತ್ತು ತಲೆ ಎತ್ತಲು ಪ್ರಾರಂಭಿಸಿದ ಆಶ್ಚರ್ಯಕರ ಕ್ಷಣವನ್ನು ಸೆರೆಹಿಡಿದು ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

ಹಲವು ನವಜಾತ ಶಿಶುಗಳು ತಮ್ಮ ಕಣ್ಣುಗಳನ್ನು ತೆರೆಯಲು ಸಾಧ್ಯವಾಗುವುದಿಲ್ಲ. ಆದರೆ, ಈ ಮಗುವಿನ ಆರಂಭಿಕ ಚಲನಶೀಲತೆ ಆನ್‌ಲೈನ್‌ನಲ್ಲಿ ನೆಟ್ಟಿಗರ ಗಮನ ಸೆಳೆದಿದೆ. ವೀಡಿಯೊದಲ್ಲಿ, ಮೂರು ದಿನದ ಮಗು ಮೇಜಿನ ಮೇಲೆ, ಯಶಸ್ವಿಯಾಗಿ ತನ್ನ ತಲೆಯನ್ನು ಮೇಲಕ್ಕೆತ್ತಿ ತನ್ನ ಚಿಕ್ಕ ಕೈ ಮತ್ತು ಕಾಲುಗಳ ಬೆಂಬಲದೊಂದಿಗೆ ತೆವಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.

You may also like

International

ಅಮೆರಿಕದಲ್ಲಿ ಭೀಕರ ಸುಂಟರಗಾಳಿ – 7 ಜನ ಸಾವು

Washington : ಅಮೆರಿಕ(America)ದಲ್ಲಿ ಭೀಕರ ಸುಂಟರಗಾಳಿ ಬೀಸಿದ ಪರಿಣಾಮ 7 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.ಅಮೆರಿಕದ ಅರ್ಕಾನ್ಸಾಸ್‌ (Arkansas) ಮತ್ತು ಇಲಿನಾಯ್ಸ್‌ (Illinois)ರಾಜ್ಯಗಳಲ್ಲಿ ಬೀಸಿದ ಸುಂಟಗಾಳಿಗೆ ಹತ್ತಾರು
International Tech

ಹಾರಿ ಹೋದ ನೀಲಿ ಹಕ್ಕಿ- ಜಾಗ ತುಂಬಿದ ನಾಯಿ

Washington : ಟ್ವಿಟ್ಟರ್ ಸಿಇಓ ಎಲಾನಾ ಮಸ್ಕ್ ಟ್ವಿಟ್ಟರ್ ಖರೀದಿಸಿದಾಗಿನಿಂದ ಹೆಚ್ಚು ಸುದ್ದಿಯಾಗುತ್ತಲೇ ಇದ್ದಾರೆ. ಸದ್ಯ ಲೋಗೋದಿಂದ ನೀಲಿ ಹಕ್ಕಿ ತೆಗೆದು ನಾಯಿ ಚಿತ್ರ ಹಾಕಿದ್ದು, ದೊಡ್ಡ