ಮನುಷ್ಯನ ಅವಿಶ್ಕಾರಕ್ಕೆ ಎಡೆ ಇಲ್ಲ, ಹಾಗೆ ತಡೆನೂ ಇಲ್ಲ. ಮನುಷ್ಯ ತಾನು ಕಂಡು ಹಿಡಿದಿದ್ದನ್ನು ತನ್ನದೇ ಏಳಿಗೆ, ಮನುಕುಲದ ಉದ್ದಾರಕ್ಕೆ ಅಂತೆಲ್ಲಾ ಹೇಳ್ತಾನೆ. ಆದ್ರೆ ಅಸಲಿಗೆ ಈ ಅವಿಶ್ಕಾರಗಳೇ ಮನುಕುಲದ ಅಳಿವಿಗೆ ಕಾರಣವಾಗೋದು. ಈಗ ಮನುಷ್ಯನನ್ನ ನಿಯಂತ್ರಿಸೋದಕ್ಕೆ, ಅವನನ್ನ ಡಬಲ್ ಬುದ್ದಿವಂತನಾಗಿ ಮಾಡೋದಕ್ಕೆ, ಮಲ್ಟಿ ಟ್ಯಾಲೆಂಟ್ ಮಾಡೋದಕ್ಕೆ ಮೆದುಳಿನ ಚಿಪ್ ಒಂದನ್ನ ಕಂಡು ಹಿಡಿಯಲಾಗಿದೆ.
ಟೆಸ್ಲಾ, ಟ್ವಿಟ್ಟರ್, ಸ್ಪೇಸ್ ಎಕ್ಸ್, ಓಪನ್ ಎಐ ಇಷ್ಟೆಲ್ಲಾ ದೈತ್ಯ ಕಂಪನಿಗಳ ಸಿಇಓ, ವಿಶ್ವದ ನಂ1 ಶ್ರೀಮಂತ ಆಗಿರೋ ಎಲಾನ್ ಮಸ್ಕ್.
ಎಲಾನ್ ಮಸ್ಕ್ ಈತನ ಇನ್ನೊಂದು ದೈತ್ಯ ಕಂಪನಿ ನ್ಯೂರಾ ಲಿಂಕ್. ಇದೇ ನ್ಯೂರಾ ಲಿಂಕ್ ಈಗ ದೊಡ್ಡದೊಂದು ಸಂಶೋಧನೆ ಮಾಡಿ ಜಗತ್ತನ್ನು ಬೆಕ್ಕಸ ಬೆರಗಾಗಿ ಮಾಡಿರೋದು. ಆ ಸಂಶೋಧನೆಯೇ ಬ್ರೈನ್ ಚಿಪ್. ಬ್ರೈನ್ ಚಿಪ್. ಅಂದ್ರೆ ಮೆದುಳಿಗೆ ಚಿಪ್ ಅಳವಡಿಸೋದು.
ಈ ಪ್ರಯೋಗಕ್ಕೆ ಮುಂದಾಗಿದ್ರು ಕೂಡ ಅಮೆರಿಕ ಸರ್ಕಾರ ಇದಕ್ಕೆ ಪರ್ಮಿಷನ್ ಕೊಟ್ಟಿರಲಿಲ್ಲ. ಈಗ ಅಮೆರಿಕದ ಫುಡ್ ಅಂಡ್ ಡ್ರಗ್ಸ್ ಆಡ್ಮಿನಿಸ್ಟ್ರೇಷನ್ ಸಂಸ್ಥೆ ಮಾನವನ ಮೇಲೆ ಈ ಪ್ರಯೋಗಕ್ಕೆ ಎಸ್ ಅಂದಿದೆ. ಮಾನವನ ತಲೆಗೆ ಚಿಪ್ ಅಳವಡಿಸೋದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಈಗ ಸಿಕ್ಕಿರೋ ಈ ಪರ್ಮಿಷನ್ ಮುಂದೊಂದು ದಿನ ಮನುಷ್ಯನ ಇಡೀ ದೇಹವೇ ಒಂದು ಎಲೆಕ್ಟ್ರೋಡ್ ಚಿಪ್ ನಿಂದ ನಿಯಂತ್ರಿಸಲ್ಪುಡುವಲ್ಲಿ ಯಶಸ್ವಿಯಾಗುತ್ತೆ ಅನ್ನೋ ನಂಬಿಕೆಯೂ ಇದೆ. ಹಾಗೊಂಗು ವೇಳೆ ಎಲೆಕ್ಟ್ರೋಡ್ ಚಿಪ್ ಮಾನವನ ದೇಹವನ್ನು ನಿಯಂತ್ರಿಸಿದ್ದೆೇ ಆದರೆ ಅದನ್ನ ಗಂಡಾಂತರ ಅನ್ನ ಬೇಕೋ, ಇಲ್ಲ ನಿಜಕ್ಕೂ ವಿಸ್ಮಯ ಅನ್ನ ಬೇಕೋ ಅನ್ನೋದು ಸದ್ಯಕ್ಕೆ ಡಿಸೈಡ್ ಮಾಡೋದಕ್ಕೆ ಆಗಲ್ಲ. ಆದ್ರೆ ಇಂಥದೊಂದು ಪ್ರಯೋಗದಿಂದ ಮನುಷ್ಯನನ್ನ ನಾನಾ ಕಾಯಿಲೆಗಳಿಂದ ಬಚಾವ್ ಮಾಡಬಹುದು ಅನ್ನೋದನ್ನ ಹವು ನ್ಯೂರೋ ತಜ್ಞರು ಹೇಳ್ತಾರೆ.
ನ್ಯೂರಾಲಿಂಕ್ ಸಂಸ್ಥೆ ಚಿಪ್ ಪ್ರಯೋಗವನ್ನು 2018ರಿಂದಲೇ ಕೈಗೊಂಡಿತ್ತು. ಈ ಬಗ್ಗೆ ನ್ಯೂರಾಲಿಂಕ್ ಸಂಸ್ಥೆ ಎಲ್ಲೂ ಮಾಹಿತಿ ಬಹಿರಂಗ ಪಡಿಸಿರಲಿಲ್ಲ. ಆದ್ರೆ ರಾಯಿಟರ್ಸ್ ಸಂಸ್ಥೆ ಈ ಬಗ್ಗೆ ಮಾಹಿತಿ ಹೊರಹಾಕಿತ್ತು. ರಾಯಿಟರ್ಸ್ ವರದಿಯಂತೆ ಚಿಪ್ ಅಳವಡಿಕೆಗಾಗಿ ಸಂಸ್ಥೆ 1500 ಪ್ರಾಣಿಗಳನ್ನು ಬಳಸಿಕೊಂಡಿದೆ. ನಿರಂತರ 5 ವರ್ಷಗಳ ಕಾಲ ಪ್ರಯೋಗ ನಡೆದಿದೆ. 5 ವರ್ಷಗಳಲ್ಲಿ ವಿವಿಧ ರೀತಿಯ ಪ್ರಾಣಿಗಳನ್ನು ಪ್ರಯೋಗಕ್ಕೆ ಬಳಸಿ ಈಗ ಯಶಸ್ವಿಯಾಗಿದೆ.
ಎಲಾನ್ ಮಸ್ಕ್ ಸಂಸ್ಥೆಯ ಪ್ರಯೋಗದಲ್ಲಿ ಪ್ರಾಣಿಗಳ ಸಾವು ಇಷ್ಟೇ ಅಂತ ಅಂದಾಜಿಸಲಾಗಿಲ್ಲ. ಕಾರಣ ಸಂಸ್ಥೆ ಈ ಬಗ್ಗೆ ಎಲ್ಲೂ ಬಾಯಿ ಬಿಟ್ಟಿಲ್ಲ. ಆದ್ರೂ ಸಂಸ್ಥೆಯ ಬಗ್ಗೆ ತನಿಖಾ ವರದಿ ಮಾಡಿದ ಕೆಲವು ಸುದ್ದಿ ಮಾಧ್ಯಮ ಹಾಗೂ ತನಿಖಾ ಸಂಸ್ಥೆಗಳು ಹೇಳೋ ಪ್ರಕಾರ 280ಕ್ಕೂ ಅಧಿಕ ಕುರಿಗಳು, 86 ಹಂದಿಗಳು, ನೂರಾರು ಇಲಿಗಳು, ಕೋತಿಗಳನ್ನು ಪ್ರಯೋಗಕ್ಕೆ ಬಳಸಲಾಗಿತ್ತು ಅಂತ ಹೇಳಲಾಗ್ತಿದೆ. ಈ ಪೈಕಿ ಬಹುತೇಕ ಪ್ರಾಣಿಗಳು ಚಿಪ್ ಕಸಿ ವೇಳೆಯೇ ಅಸುನೀಗಿವೆ ಎಂದು ತನಿಖಾ ಸಂಸ್ಥೆಗಳು ವರದಿಮಾಡಿವೆ. ಆದರೆ, ನ್ಯೂರಾಲಿಂಕ್ ಸಂಸ್ಥೆ ಇದನ್ನ ಈ ಕ್ಷಮದವೆರೆಗೂ ಒಪ್ಪಿಕೊಂಡಿಲ್ಲ. ಮಾನವನ ಮೇಲೆ ಯಾವುದೇ ಪ್ರಯೋಗ ಕೈಗೊಳ್ಳುವ ಮೊದಲು ಫಾರ್ಮಾ ಸಂಸ್ಥೆಗಳು ಅನ್ಯಪ್ರಾಣಿಗಳನ್ನು ಪ್ರಯೋಗಕ್ಕೆ ಗುರಿಪಡಿಸುವುದು ಸಹಜ. ಹಂದಿಗಳು, ಕೋತಿಗಳು, ಇಲಿಗಳಲ್ಲಿ ಪ್ರಯೋಗ ಸಕ್ಸಸ್ ಆದ್ರೆ ಮಾತ್ರ ಅದು ಮಾನವನ ಮೇಲೆಯೂ ಸಕ್ಸಸ್ ಆಗುತ್ತೆ ಅಂತ ಹಲವು ಪ್ರಯೋಗಗಳು ಈಗಾಗಲೇ ಸಾಭೀತು ಮಾಡಿವೆ.
ಈಗಲೇ ಮೆದುಳಿನ ಚಿಪ್ನ ಸೂಪರ್ ಪವರ್ ಸ್ವಭಾವದ ರಹಸ್ಯ ಇನ್ನೂ ಗುಟ್ಟಾಗಿಯೇ ಉಳಿದಿದೆ. ನ್ಯೂರಾಲಿಂಕ್ ಸಂಸ್ಥೆ ಮಾನವನ ಮೆದುಳಿಗೆ ಚಿಪ್ ಅಳವಡಿಸೋ ಕಾರ್ಯಕ್ಕೆ ಮುಂದಾಗಿರೋದು ಎಷ್ಟು ಸತ್ಯವೋ ಅದೇ ರೀತಿ ಅದರಿಂದ ಆಗೋ ಅಡ್ಡ ಪರಿಣಾಮಗಳ ಬಗ್ಗೆ ಸತ್ಯ ಮುಚ್ಚಿಟ್ಟಿರೋದು ಅಷ್ಟೇ ಸತ್ಯ. ಎಲ್ಲವೂ ಮಾನವನ ಏಳಿಗೆಗಾಗಿ ಅಂತ ಹೇಳುತ್ತಾ ನ್ಯೂರಾಲಿಂಕ್ ಈಗ ಮಾನವ ಪ್ರಯೋಗಕ್ಕೆ ಅನುಮತಿ ಪಡೆದಿದೆ.
ಮೆದುಳಿನ ಚಿಪ್ ಹೆೇಗಿರಲಿದೆ.
1. ಸಣ್ಣ ನಾಣ್ಯದ ಗಾತ್ರದಲ್ಲಿರೋ ಪ್ಲೇಟ್ ಗ್ಯಾಜೆಟ್
2. ಎಲೆಕ್ಟ್ರೋಡ್ ಲೇಸ್ಡ್ ವಯರ್‌ಗಳಿಂದ ರಚನೆ
3. ಕೂದಲಿಗಿಂತ 20 ಪಟ್ಟು ಚಿಕ್ಕದಾದ ವಯರ್
4. ಚಿಪ್‌ನಲ್ಲಿ ಮೆದುಳಿನ ಸಂದೇಶಗಳು ಸಂಗ್ರಹಣೆ
5. ಸಂದೇಶಗಳನ್ನು ಫೋನ್, ಕಂಪ್ಯೂಟರ್‌ಗೆ ರವಾನೆ
ಈ ಚಿಪ್, ಪುಟ್ಟ ನಾಣ್ಯದ ಗಾತ್ರದ ಗ್ಯಾಜೆಟ್. ಇದನ್ನು ಮೆದುಳಿನ ಒಂದು ನಿರ್ದಿಷ್ಟ ಭಾಗದಲ್ಲಿ ಅಳವಡಿಸಲಾಗುತ್ತದೆ. ಚಿಪ್‌ನಲ್ಲಿ ನಮ್ಮ ತಲೆಕೂದಲಿಗಿಂತಲೂ 20 ಪಟ್ಟು ಚಿಕ್ಕದಾದ ಎಲೆಕ್ಟ್ರೋಡ್ ಲೇಸ್ಡ್ ವಯರ್‌ಗಳಿರುತ್ತವೆ. ಈ ವಯರ್‌ಗಳು ಸಾವಿರಕ್ಕೂ ಹೆಚ್ಚು ವಿದ್ಯುದ್ವಾರ ಹೊಂದಿರುತ್ತವೆ. ಮೆದುಳಿಗೆ ಬರುವಂಥ ಸಂದೇಶ ಸಂಗ್ರಹಣೆ, ಮೆದುಳಿನ ಕಾರ್ಯ ಉತ್ತೇಜನಕ್ಕೆ ಇದು ನೆರವಾಗುತ್ತದೆ. ಚಿಪ್‌ನಲ್ಲಿ ಸಂಗ್ರಹಗೊಳ್ಳುವ ದತ್ತಾಂಶಗಳು ಯಾವುದೇ ಪ್ಲಗ್ ಅಥವಾ ವಯರ್‌ನ ಮಧ್ಯಸ್ಥಿಕೆಯಿಲ್ಲದೆ ಬಾಹ್ಯವಾಗಿ ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರನ್ನು ತಲುಪುವ ವ್ಯವಸ್ಥೆ ಮಾಡಲಾಗುತ್ತದೆ. ಯಾವುದೇ ಅಂಗಕ್ಕೆ ಮೆದುಳು ಮೆಸೆಜ್ ಪಾಸ್ ಮಾಡೋದನ್ನ ನಿಲ್ಲಿಸಿದ್ರೂ ಅದನ್ನು ಫೋನ್ ಅಥವಾ ಕಂಪ್ಯೂಟರ್ ಮೂಲಕ ರವಾನೆ ಮಾಡಬಹುದು. ನಿಷ್ಕ್ರೀಯ ಅಂಗವೂ ಇದರಿಂದ ಕ್ರಿಯಾತ್ವಕವಾಗಿ ಕೆಲಸ ಮಾಡುತ್ತೆ.