Bangalore: ಎರಡು ತಿಂಗಳಿಂದ ಜನರಿಗೆ ಬಿಸಿ ಮುಟ್ಟಿಸಿದ ಕರ್ನಾಟಕ ವಿದ್ಯುಚ್ಶಕ್ತಿ ನಿಯಂತ್ರಣ ಆಯೋಗವು ಇದೀಗ ಮತ್ತೊಮ್ಮೆ ಶಾಕ್ ನೀಡಿದೆ. ಇಂಧನ ಮತ್ತು ವಿದ್ಯೂತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕ ಹೆಸರಿನಲ್ಲಿ ಪ್ರತಿ ಯುನಿಟ್ ಗೆ ವಿವಿಧ ಎಸ್ಕಾಂಗಳ ಗ್ರಾಹಕರಿಗೆ ಯುನಿಟ್ ಗೆ 41 ಪೈಸೆಯಿಂದ 50 ಪ್ರೈಸೆವರೆಗೆ ಶುಲ್ಕ ಹೆಚ್ಚಳ ಮಾಡಿ ಆದೇಶ ಮಾಡಿದೆ.
ಜೂಲೈ ಒಂದರಿಂದ ಪರಿಷ್ಕೃತ ಶುಲ್ಕ ಜಾರಿಯಾಗಲಿದ್ದು, ಗೃಹ ಜ್ಯೋತಿ ಫಲಾನುಭವಿ ಗ್ರಾಹಕರು ಈ ಹೊರೆಯಿಂದ ಪಾರಾಗಲಿದ್ದಾರೆ ಎಂದು ಕೆಇಆರ್ ಸಿ ಮೂಲಗಳು ತಿಳಿಸಿವೆ. ಜನವರಿಯಿಂದ ಮಾರ್ಚವರೆಗೆ ಇಂಧನ ಇಲಾಖೆಗೆ ಹೊರೆಯಾಗಲಿರುವ ಹೆಚ್ಚುವರಿ ಇಂಧನ ಹಾಗೂ ವಿದ್ಯೂತ್ ಖರೀದಿ ವೆಚ್ಚವನ್ನು ಏಪ್ರಿಲ್ ನಿಂದ ಜೂನ್ ನಡುವಿನ ಮೂರು ತಿಂಗಳ ಅವಧಿಯಲ್ಲಿ ಗ್ರಾಹಕರಿಂದ ಸಂಗ್ರಹಿಸಬೇಕಾಗಿತ್ತು.
ಈ ಹಿನ್ನೆಲೆ ಮಾರ್ಚ್ ನಲ್ಲೇ ಆದೇಶ ಹೊರಡಿಸಿದ್ದ ಕೆಇಆರ್ ಸಿಯು ಎಸ್ಕಾಂಗಳ ಗ್ರಾಹಕರಿಂದ ಮೂರು ತಿಂಗಳ ಅವಧಿಗೆ ಸೀಮಿತವಾಗಿ ಬರೋಬ್ಬರಿ ಪ್ರತಿ ಯುನಿಟ್ ಗೆ 101 ಪೈಸೆವರೆಗೂ ಹೆಚ್ಚುವರಿ ಶುಲ್ಕ ಸಂಗ್ರಹಿಸಲು ಆದೇಶಿಸಿತ್ತು. ಆದರೆ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ತಾಂತ್ರಿಕ ಕಾರಣಗಳನ್ನು ನೀಡಿ ದರ ಹೆಚ್ಚಳ ಅನುಷ್ಟಾನಗೊಳಿಸಿರಲಿಲ್ಲ.