Kornersite

Just In National Uttar Pradesh

ಮದುವೆಯಾದ ದಿನವೇ ನವ ದಂಪತಿ ಹೃದಯಾಘಾತಕ್ಕೆಬಲಿ!

ಮದುವೆಯಾದ ರಾತ್ರಿಯೇ ನವ ದಂಪತಿ ಹೃದಯಘಾತದಿಂದ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆಯೊಂದು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿದೆ.

ಪ್ರತಾಪ್ ಯಾದವ್(22), ಪುಷ್ಪಾ (20) ಈ ರೀತಿ ಸಾವನ್ನಪ್ಪಿದ ದಂಪತಿ. ಮೇ. 30 ರಂದು ಇಬ್ಬರ ಮದುವೆ ನಡೆದಿದ್ದು, ಅಂದೇ ರಾತ್ರಿ ನವಜೋಡಿ ತಮ್ಮ ಕೋಣೆಗೆ ತೆರಳಿದ್ದಾರೆ. ಆದರೆ, ಮರುದಿನ ಬೆಳಿಗ್ಗೆ ಇಬ್ಬರೂ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಪೊಲೀಸರು ಬಂದು ಮೃತದೇಹವನ್ನು ಶವಾಗಾರಕ್ಕೆ ರವಾನಿಸಿದ್ದು, ಪೋಸ್ಟ್‌ ಮಾರ್ಟಂ ವರದಿಯಲ್ಲಿ ಇಬ್ಬರೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ. ಪ್ರತಾಪ್ ಮತ್ತು ಪುಷ್ಪಾ ಅವರ ಅಂತ್ಯಕ್ರಿಯೆಯನ್ನು ಪ್ರತಾಪ್ ಅವರ ಗ್ರಾಮದಲ್ಲಿ ಅಪಾರ ಜನಸ್ತೋಮದ ನಡುವೆ ಒಂದೇ ಚಿತಾಗಾರದಲ್ಲಿ ನೆರವೇರಿಸಲಾಗಿದೆ.

You may also like

National

ರಾಮಲೀಲಾ ಮೈದಾನದಲ್ಲಿ ಜಮಾಯಿಸುತ್ತಿರುವ ರೈತರು

ನವದೆಹಲಿ : ದೇಶದ ಬೇರೆ ಬೇರೆ ರಾಜ್ಯಗಳಿಂದ ರೈತರು ಇಂದು ದೆಹಲಿಯಲ್ಲಿ ಜಮಾಯಿಸುತ್ತಿದ್ದಾರೆ. ವಿವಿಧ ರೈತ ಸಂಘಟನೆಗಳ ಯುನೈಟೆಡ್ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕೃಷಿ ಉತ್ಪನ್ನಗಳ ಕನಿಷ್ಠ
Just In Sports

ಹೋರಾಡಿ ಸೋತ ರಾಜಸ್ಥಾನ್ (Rajasthan) – ಸತತ ಎರಡನೇ ಜಯ ದಾಖಲಿಸಿದ ಪಂಜಾಬ್ (Punjab)

Guwahati: ನಾಯಕ ಶಿಖರ್‌ ಧವನ್‌ (Shikhar Dhawan), ಪ್ರಭ್‌ಸಿಮ್ರಾನ್‌ ಸಿಂಗ್‌ (Prabhsimran Singh) ಬ್ಯಾಟಿಂಗ್ ಹಾಗೂ ನಾಥನ್ ಎಲ್ಲಿಸ್ ಬೌಲಿಂಗ್‌ ದಾಳಿಯಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ