ಈಜಿಪ್ಟ್: ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ರಕ್ಷಿಸೋದು ತಾಯಿ. ಆದ್ರೆ ಇಲ್ಲೊಬ್ಬ ತಾಯಿ ತನ್ನ 5 ವರ್ಷದ ಸ್ವಂತ ಮಗನ ತಲೆಯನ್ನ ಬೇಯಿಸಿ ತಿಂದಿದ್ದಾಳೆ. ಓದುವಾಗ ವಿಚಿತ್ರ ಅನ್ನಿಸಿದ್ರು ಇದು ಸತ್ಯ ಕಣ್ರೀ.
ಈ ಘಟನೆ ನಡೆದಿರೋದು ಈಜೀಪ್ಟ್ ನಲ್ಲಿ. ಅಲ್ಲಿಯ ಸ್ಥಳೀಯ ಮಾದ್ಯಮದವರು ಶುಕ್ರವಾರ ಈ ಘಟನೆ ನಡೆದಿದೆ ಎಂದು ವರದಿ ಮಾಡಿದೆ. ಸುಮಾರು ಮೂರು ವರ್ಷಗಳಿಂದ ಪತಿಯಿಂದ ಬೇರೆಯಾಗಿ ಏಕಾಂಗಿಯಾಗಿ ವಾಸಿಸುತ್ತಿದ್ದ 29 ವರ್ಷದ ಹನಾ ಎನ್ನುವವಳು ಈ ಕೃತ್ಯ ಮಾಡಿದ್ದಾಳೆ.
ಈಜೀಪ್ಟ್ ದಿನಪತ್ರಿಕೆ ಕೈರೋ 24ರ ಪ್ರಕಾರ, ಆರೋಪಿಗೆ ಮಗನನ್ನ ಕೊಲ್ಲುವ ಉದ್ದೇಶವಿರಲಿಲ್ಲವಂತೆ. ಆದರೆ ಮಗ ತನ್ನನ್ನ ಶಾಶ್ವತವಾಗಿ ತೊರೆಯುವುದು ಬೆಡ ಎಂದು ತಲೆಯನ್ನು ತಿನ್ನಲು ಪ್ರಯತ್ನಿಸಿದ್ದಾಳೆ ಎಂದು ತನಿಖೆಯ ವೇಳೆ ವಿಷಯ ಬಯಲ್ಗೆ ಬಂದಿದೆ. ಅಸಲಿಗೆ ಮಗನ ದೇಹದ ಬಾಗಗಳು ಮನೆಯ ಬಕೆಟ್ ನಲ್ಲಿ ಸಿಕ್ಕಿದ್ದವಂತೆ ಪೊಲೀಸರಿಗೆ.
ಈಕೆಯ ಪರ ವಕೀಲರು ಆರೋಪಿ ಮಾನಸಿಕ ಅಸ್ವಸ್ಥೆ ಎಂದು ಹೇಳಿದ್ದಾರೆ. ಆದರೆ ಈಜಿಪ್ಟ್ ಪಬ್ಲಿಕ್ ಪ್ರಾಸಿಕ್ಯೂಷನ್ ಪ್ರಕಾರ ಮಗನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ನಂತರ ತಲೆಯನ್ನು ಬೇಯಿಸಿ ತಿನ್ನಲು ಯತ್ನಿಸಿರುವುದು ಯಾವುದೇ ರೀತಿಯ ಮಾನಸಿಕ ಅಸ್ವಸ್ಥೆಯ ಲಕ್ಷಣ ಅಲ್ಲ ಎಂದು ಹೇಳಿದೆ.
ಅಸಲಿಗೆ ಮನೆಯ ಬಾತ್ ರೂಂ ನಲ್ಲಿ ಮೂರು ಬಾರಿ ಮಗನ ಮೇಲೆ ಹಲ್ಲೆ ಮಾಡಿದ್ದಾಳೆ. ಸಾಕ್ಷ ನಾಶ ಮಾಡುವ ನಿಟ್ಟಿನಲ್ಲಿ ದೇಹದ ಭಾಗಗಳನ್ನು ಹೂಣಲು ಯೋಚನೆ ಮಾಡಿದ್ದಳಂತೆ. ಆದರೆ ಅದಕ್ಕೂ ಮೊದಲೇ ಅರೆಸ್ಟ್ತ್ ಆಗಿದ್ದಾಳೆ.
ಈಕೆ ಹೀಗೆ ಮಾಡಲು ಅಸಲಿ ಕಾರಣ ಆಕೆಯ ಪತಿ ಹಾಗೂ ಅವನ ಪರಿವಾರದವ್ರು. ಪತಿ ಮಗನ ಜೊತೆ ಅವಾಗವಾಗ ಮಾತನಾಡುತ್ತಿದ್ದ. ಎಲ್ಲಿ ತನ್ನಿಂದ ಮಗನನ್ನು ಬೇರ್ಪಡಿಸಿ ಕರೆದುಕೊಂಡು ಹೋಗ್ತಾರೋ ಅನ್ನೋ ಕಾರಣಕ್ಕೆ ತನ್ನ ಮಗ ತನ್ನಿಂದ ದೂರವಾಗಬಾರದು ಎಂದು ಈ ಕೃತ್ಯ ನಡೆಸಿದ್ದಾಳೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.