New Delhi: ಜಾಗತಿಕ ಬೆಲೆಗೆ ಅನುಗುಣವಾಗಿ ಖಾದ್ಯ ತೈಲಗಳ ಬೆಲೆಯನ್ನು ಪ್ರತಿ ಲೀಟರ್ ಗೆ 8 ರಿಂದ 12 ರೂ.ಗಳಷ್ಟು ಕಡಿತಗೊಳಿಸುವಂತೆ ಸಂಸ್ಥೆಗಳಿಗೆ ಸರ್ಕಾರ ಮನವಿ ಮಾಡಿಕೊಂಡಿದ್ದಾರೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಕಾರ್ಯದರ್ಶಿ ಸಂಜೀವ್ ಚೋಪ್ರಾ ಶುಕ್ರವಾರ ಈ ಸಂಬಂಧ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿಸಿದ್ದಾರೆ.
ವರದಿ ಪ್ರಕಾರ, ತಯಾರಕರು ಅಥವಾ ರಿಫೈನರ್ ಗಳು ವಿತರಕರಿಗೆ ಬೆಲೆಯಲ್ಲಿ ಕಡಿತ ಮಾಡಿದಾಗ, ಅದರ ಲಾಭವನ್ನು ಉದ್ಯಮದಿಂದ ಗ್ರಾಹಕರಿಗೆ ವರ್ಗಾಯಿಸಬೇಕು ಮತ್ತು ಸಚಿವಾಲಯಕ್ಕೆ ನಿಯಮಿತವಾಗಿ ಮಾಹಿತಿ ನೀಡಬಹುದು ಎಂದು ಕೇಂದ್ರ ಸಚಿವಾಲಯವು ಪ್ರತಿನಿಧಿಗಳಿಗೆ ತಿಳಿಸಿದೆ.
ಖಾದ್ಯ ತೈಲ ಕಂಪನಿಗಳು ಆಮದು ಮಾಡಿಕೊಳ್ಳುವ ಖಾದ್ಯ ತೈಲಗಳ ಅಂತರಾಷ್ತ್ರೀಯ ಬೆಲೆಗಳಲ್ಲಿನ ನಿರಂತರ ಇಳಿಕೆಗೆ ಅನುಗುಣವಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆಗಳು ಕಡಿಮೆಯಾಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಚಿವಾಲಯವು ಸಭೆಯಲ್ಲಿ ಹೇಳಿದೆ.