ಚಂದನವನದ (Sandalwood) ಜ್ಯೂನಿಯರ್ ರೆಬಲ್ ಅಭಿಷೇಕ್- ಅವಿವ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ. ಅದ್ದೂರಿ ಮದುವೆಗೆ ಇಡೀ ಚಿತ್ರರಂಗವೇ ಸಾಕ್ಷಿಯಾಗಿದೆ. ಮದುವೆ ಸಂಭ್ರಮದಲ್ಲಿನ ಫೋಟೋಗಳು ಇಲ್ಲಿವೆ.

ರೆಬೆಲ್ ಸ್ಟಾರ್ ಅಂಬರೀಶ್ ಅವರ ಆಸೆಯಂತೆಯೇ ಪುತ್ರ ಅಭಿಷೇಕ್ ಮದುವೆ ನಡೆದಿದೆ. ಅಂಬಿ ಪುತ್ರನ ಮದುವೆ ಗೌಡರ ಸಂಪ್ರದಾಯದಂತೆ ನಡೆದಿದೆ. ಕೆಲ ವರ್ಷಗಳ ಹಿಂದೆ ಸಮಾರಂಭವೊಂದರಲ್ಲಿ ಭೇಟಿಯಾದ ಅಭಿ-ಅವಿವ, ಪರಿಚಯ ಸ್ನೇಹವಾಗಿ ಪ್ರೀತಿಗೆ ತಿರುಗಿತ್ತು. 5 ವರ್ಷಗಳ ನಂತರ ಪ್ರೇಮವನ್ನು ಮದುವೆಯೆಂಬ ಮುದ್ರೆ ಒತ್ತಿದ್ದಾರೆ. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದಲ್ಲಿ ಅದ್ದೂರಿಯಾಗಿ ಅಭಿ-ಅವಿವ ಮದುವೆಯು ಅದ್ದೂರಿಯಾಗಿ ನೆರವೇರಿತು.

ಅವಿವರನ್ನ (Aviva) ಅಂದೇ ಸೊಸೆ ಎಂದು ಅಂಬಿ ತೀರ್ಮಾನಿಸಿದ್ದರು. ಅವರ ಆಸೆಯಂತೆಯೇ ಅಭಿ-ಅವಿವ ಮದುವೆ ಜರುಗಿದೆ. ಪತಿಯ ಸ್ಥಾನದಲ್ಲಿ ಮುಂದೆ ನಿಂತು ಸುಮಲತಾ ಮದುವೆಯನ್ನು ಮಗನ ಮನದರಸಿ ಜೊತೆ ನಡೆಸಿಕೊಟ್ಟರು. ಮದುವೆಯಲ್ಲಿ ಅಭಿಷೇಕ್ (Abhishek Ambareesh) ಗೋಲ್ಡನ್ ಬಣ್ಣದ ಶರ್ಟ್ ಮತ್ತು ಪಂಚೆಯಲ್ಲಿ ಕಾಣಿಸಿಕೊಂಡರೆ, ಅವಿವ ಗುಲಾಬಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಸಂಸದೆ ಸುಮಲತಾ ಅಂಬರೀಶ್ ಕೂಡ ಗೋಲ್ಡನ್ ಸೀರೆಯಲ್ಲಿ ಮಿಂಚಿದ್ದಾರೆ. ತಮ್ಮ ಮದುವೆಗೆ, ಅವಿವ ಅವರೇ ಉಡುಗೆಯನ್ನ ಡಿಸೈನ್ ಮಾಡಿದ್ದಾರೆ ಎನ್ನಲಾಗಿದೆ.

ರಜನಿಕಾಂತ್, ಮೀನಾ, ನ್ಯಾಷನಲ್ ಸ್ಟಾರ್ ಯಶ್-ರಾಧಿಕಾ ಪಂಡಿತ್, ಸುದೀಪ್, ಪವಿತ್ರಾ ಲೋಕೇಶ್, ತೆಲುಗು ನಟ ನರೇಶ್, ಸಿಂಗರ್ ವಿಜಯ್ ಪ್ರಕಾಶ್ ದಂಪತಿ, ಗುರುಕಿರಣ್, ತಮಿಳು ನಟ ಮೋಹನ್ ಬಾಬು, ಕ್ರಿಕೆಟಿಗ ಅನಿಲ್ ಕುಂಬ್ಳೆ, ನಟಿ ಶುಭ್ರ ಅಯ್ಯಪ್ಪ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಭಾಗವಹಿಸಿದ್ದರು.
