ಬಸ್ಸಿನಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿಗೆ, ಚಪ್ಪಲಿ ಏಟು ನೀಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಈ ಕುರಿತ ವಿಡಿಯೋ ವೈರಲ್ ಆಗಿದ್ದು, ಮಂಡ್ಯದ ಕೆ.ಆರ್. ಪೇಟೆಯ ಬಸ್ ಸ್ಟ್ಯಾಂಡಿನ ಬಸ್ಸಿನೊಳಗೆ ಈ ಘಟನೆ ನಡೆದಿದೆ. ವೈರಲ್ ಆದ ವಿಡಿಯೋದಲ್ಲಿ ಮಹಿಳೆಯು, ನಿನಗೆ ಅಕ್ಕ ತಂಗಿ ಅವ್ವ ಯಾರೂ ಇಲ್ವೇನೋ ಅವರಿಗೆ ಹೀಗೇ ಮಾಡ್ತಿದ್ದ್ಯಾ? ಹೇಳಿದೆ ತಾನೆ ಹೀಗೆ ಮಾಡಬೇಡ ಅಂತ, ಹಿಡ್ಕೊಳ್ಳಿ ಅವನನ್ನ ನಿಮ್ಮನೆ ಹೆಣ್ಣಮಕ್ಕಳಿಗೆ ಹೀಗಾಗಿದ್ದರೆ ಸುಮ್ಮನೇ ಬಿಡ್ರಿದ್ರಾ? ಹೀಗೆಂದು ಕಾಲರ್ ಪಟ್ಟಿ ಹಿಡಿದು ಒಂದೇ ಸಮ ಕಪಾಳಿಗೆ ಹೊಡೆದಿರುವುದು ಕಂಡು ಬಂದಿದೆ.
ವಿಡಿಯೋದಲ್ಲಿದ್ದ ಪಾಪಿ, ಸ್ಪರ್ಶಿಸಲು ನೋಡಿದಾಗ ಮಹಿಳೆ ಎಚ್ಚೆತ್ತುಕೊಂಡು ಬಸ್ಸಿನೊಳಗೇ ಏಟು ಕೊಟ್ಟಿದ್ದಾರೆ. ಆದರೆ ಸಹಪ್ರಯಾಣಿಕರು ಮೂಕಪ್ರೇಕ್ಷಕರಂತೆ ಇದ್ದಿರುವುದು ಹಾಗೂ ಅವರಿಗೆ ಸಹಾಯ ಮಾಡದಿರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಮಹಿಳೆಯೊಂದಿಗೆ ಏಟು ತಿಂದ ವ್ಯಕ್ತಿ ತಪ್ಪಿಸಿಕೊಂಡು ಹೋಗಿದ್ದಾನೆ.