ಜಾತ್ರಾ ಮಹೋತ್ಸವದಲ್ಲಿ (Festival) ನೂಕುನುಗ್ಗಲು ಉಂಟಾಗಿದ್ದರಿಂದಾಗಿ ಅಗ್ನಿ ಕುಂಡದಲ್ಲಿ ಬಿದ್ದು 30 ಜನರು ಗಾಯಗೊಂಡಿರುವ (Injur) ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ (Turuvekere) ತಾಲ್ಲೂಕಿನ ಮಾವಿನಕೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
35 ವರ್ಷಗಳ ನಂತರ ರಾಮಲಿಂಗೇಶ್ವರ ಹಾಗೂ ಚೌಡೇಶ್ವರಿ ಜಾತ್ರಾ ಮಹೋತ್ಸವ ನಡೆದಿದೆ. ಈ ಜಾತ್ರೆಯಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಹರಕೆ ನಿಮಿತ್ತ ಕೆಂಡದ ಕುಂಡ ನಿರ್ಮಿಸಲಾಗಿತ್ತು. ಅಗ್ಗಿ ಹಾಯುವ ವೇಳೆ ನೂಕುನುಗ್ಗಲೂ ಸಂಭವಿಸಿ ಕೆಳೆಗೆ ಬಿದ್ದು 30 ಜನ ಗಾಯೊಂಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ದೇವರನ್ನ ಬಿಟ್ಟು ಓಡಿಹೋಗಿದ್ದಾರೆ. ತುರುವೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗಾಯಾಳುಗಳನ್ನು ತುರುವೇಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.