ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambarish) ಅವರ ಆರತಕ್ಷತೆ ಇಂದು ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಆರತಕ್ಷತೆಗಾಗಿ (Reception) ಅರಮನೆ ಮೈದಾನ ಸಿಂಗಾರಗೊಂಡಿದ್ದು, ಅಭಿಷೇಕ್ ಮತ್ತು ಅವಿವಾ (Aviva) ಜೋಡಿಗೆ ಹಾರೈಸುವುದಕ್ಕಾಗಿ ಇಂದು ಕೂಡ ದೇಶದ ವಿವಿಧ ಭಾಗಗಳಿಂದ ಗಣ್ಯರು ಆಗಮಿಸುವ ಸಾಧ್ಯತೆ ಇದೆ.
ಎರಡು ದಿನಗಳ ಹಿಂದೆ ನಡೆದ ಮದುವೆ (Wedding) ಸಮಾರಂಭದಲ್ಲಿ ನಟ ರಜನಿಕಾಂತ್, ಸುದೀಪ್, ಯಶ್, ಕ್ರಿಕೆಟಿಗ ಅನಿಲ್ ಕುಂಬ್ಳೆ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ತಮಿಳು ನಟ ಮೋಹನ್ ಬಾಬು, ತೆಲುಗು ನಟ ನರೇಶ್, ನಟಿ ಪವಿತ್ರ ಲೋಕೇಶ್, ನಟಿ ಶುಭ್ರ ಅಯ್ಯಪ್ಪ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಗಾಯಕ ವಿಜಯ್ ಪ್ರಕಾಶ್ ಸೇರಿದಂತೆ ಹಲವರು ಭಾಗವಹಿಸಿ, ಆಶೀರ್ವಾದ ಮಾಡಿದ್ದರು.
ಇಂದು ಪ್ಯಾಲೇಸ್ ಮೈದಾನದ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ನಟ ಅಮಿತಾಭ್, ತೆಲುಗಿನ ಖ್ಯಾತ ನಟ ಚಿರಂಜೀವಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಭಾಗಿಯಾಗುವ ನಿರೀಕ್ಷೆಯಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಅಂದಾಜು 1 ಲಕ್ಷ ಜನರು ಇದರಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗ- ರಾಜಕೀಯ ರಂಗದ ಗಣ್ಯರು ಭಾಗಿಯಾಗಲಿದ್ದಾರೆ.