Kornersite

Crime Just In Karnataka State

ವಿವಾಹಕ್ಕೆ ಒಪ್ಪದ ಕುಟುಂಬಸ್ಥರು; ಬಸ್ ನಲ್ಲಿಯೇ ವಿಷ ಸೇವಿಸಿದ ಪ್ರೇಮಿಗಳು!

ಹಾವೇರಿ: ಸ್ಲೀಪರ್ ಕೋಚ್ ಬಸ್ಸಿ (Sleeper Coach Bus) ನಲ್ಲಿ ಪ್ರೇಮಿಗಳು ವಿಷ ಸೇವಿಸಿ ಮಲಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಈ ಘಟನೆ ರಾಣೆಬೆನ್ನೂರು ನಗರದ ಚಳಗೇರಿ ಟೋಲ್ ಹತ್ತಿರ ಇರುವ ಗ್ರೀನ್ ಪ್ಯಾಲೇಸ್ ಹೋಟೆಲ್ ಹತ್ತಿರ ಈ ಘಟನೆ ಬೆಳಕಿಗೆ ಬಂದಿದೆ.

ಮಾ ರಾಮಕೃಷ್ಣಪ್ಪ (20) ಸಾವನ್ನಪ್ಪಿದ ಯುವತಿ. ಯುವಕ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಬಿ.ಕಾಂ ಫೈನಲ್ ಓದುತ್ತಿದ್ದ ಹೇಮಾಗೆ ಬಾಗಲಕೋಟೆ ಮೂಲಕ ಅಖಿಲ್ ಎಂಬಾತನೊಂದಿಗೆ ಪ್ರೇಮಾಂಕುರವಾಗಿದೆ. ಆದರೆ, ಇವರಿಬ್ಬರ ಮದುವೆಗೆ ಮನೆಯವರು ಒಪ್ಪಿಗೆ ಸೂಚಿಸಿಲ್ಲ. ಹೀಗಾಗಿ ಈ ಜೋಡಿ ಸಾಯುವ ತೀರ್ಮಾನಕ್ಕೆ ಬಂದಿದೆ.

ಇದಕ್ಕು ಮುನ್ನ ಮದುವೆಗೆ ನೀವು ಒಪ್ಪಿಗೆ ನೀಡಿಲ್ಲ. ಹೀಗಾಗಿ ಬಾಂಬೆಗೆ ಹೋಗುತ್ತಿದ್ದೇವೆ ಯುವತಿ ಫೋನ್ ಮಾಡಿ ಹೇಳಿದ್ದಳು. ಬಳಿಕ ಸ್ಲೀಪರ್ ಕೋಚ್ ಬಸ್ ನಲ್ಲೇ ವಿಷ ಕುಡಿದು ಮಲಗಿದ್ದಾರೆ. ದಾರಿ ಮಧ್ಯೆ ಊಟಕ್ಕೆ ಬಸ್ ನಿಲ್ಲಿಸಿದಾಗ ಬಸ್ ನಲ್ಲಿದ್ದವರಿಗೆ ಅನುಮಾನ ಬಂದಿದೆ. ವಿಷದ ವಾಸನೆ ಬಂದ ಕೂಡಲೇ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸುವ ಯತ್ನ ಮಾಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಯುವತಿ ಸಾವನ್ನಪ್ಪಿದ್ದು, ಯುವಕ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾನೆ. ಈ ಕುರಿತು ರಾಣೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Crime

ಬೈಕ್ ನಲ್ಲಿಯೇ ಸಹೋದರಿಯ ಶವ ಸಾಗಿಸಿದ ಅಣ್ಣ!

ನವದೆಹಲಿ : ಆಂಬುಲೆನ್ಸ್ ಬರುವುದಕ್ಕೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಸಹೋದರಿಯ ಮೃತ ದೇಹವನ್ನು ಬೈಕ್ ನಲ್ಲಿಯೇ ತೆಗೆದುಕೊಂಡು ಹೋಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕೌಶಾಂಬಿಯಲ್ಲಿ