ಬೆಂಗಳೂರು: ಕೇವಲ ಎರಡೂವರೆ ನಿಮಿಷದಲ್ಲಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ವೈದ್ಯರ ತಂಡವೊಂದು ಅಚ್ಚರಿ ಮೂಡಿಸಿದೆ.
ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯ ಡಾ ವಿಕ್ರಂ ಹುಡೇದ್ ಹಾಗೂ ಅವರ ತಂಡ 47 ವರ್ಷದ ವ್ಯಕ್ತಿಯೊಬ್ಬರಿಗೆ ಕೇವಲ ಎರಡೂವರೆ ನಿಮಿಷದಲ್ಲಿ ಬ್ರೈನ್ ಆಪರೇಷನ್ ಮಾಡಿ ವೈದ್ಯ ಲೋಕವೇ ಆಶ್ಚರ್ಯ ಪಡುವಂತೆ ಮಾಡಿದ್ದಾರೆ. ಬ್ರೈನ್ ಅನ್ಯೂರಿಸಂ ಎನ್ನುವ ಕಾಯಿಲೆಗೆ ಡಾ. ವಿಕ್ರಂ ಹುಡೆದ್ ಡಿವೈಸ್ ಒಂದರ ಮೂಲಕ ಕಾಲಿನಿಂದ ತಲೆಗೆ ಸಂಪರ್ಕ ಕಲ್ಪಿಸಿ ಬ್ರೈನ್ ಒಳಗೆ ಉಂಟಾಗಿದ್ದ ಗುಳ್ಳೆಯ ಆಪರೇಷನ್ ಮಾಡಿದ್ದಾರೆ. ಅಲ್ಲದೇ, ವ್ಯಕ್ತಿಗೆ ಯಾವುದೇ ತೊಂದರೆ ಇಲ್ಲದೆ ಸುರಕ್ಷಿತವಾಗಿ ಹೊರಗೆ ತೆಗೆದಿದ್ದಾರೆ.
47 ವರ್ಷದ ವ್ಯಕ್ತಿಯೊಬ್ಬರಿಗೆ ಬ್ರೈನ್ ಆಪರೇಷನ್ ಮಾಡಲು ಈ ವೈದ್ಯರ ತಂಡ ಮುಂದಾಗಿತ್ತು. ತಲೆಯ ಒಳಗಿನ ಕೂದಲಿನ ಗಾತ್ರದ ನರಮಂಡಲದಲ್ಲಿ ಆಪರೇಷನ್ ಮಾಡುವ ಸವಾಲನ್ನು ಈ ತಂಡ ಎದುರಿಸಿದ್ದು, ಒಂದು ಗಂಟೆ ಸಮಯ ತೆಗೆದುಕೊಂಡು ಈ ಆಪರೇಷನ್ ಮಾಡಲು ಮುಂದಾಗಿತ್ತು. ಆದರೆ ಕೇವಲ ಎರಡೂವರೆ ನಿಮಿಷದಲ್ಲಿ ಆಪರೇಷನ್ ಮಾಡಿ ಮುಗಿಸುವ ಮೂಲಕ ವೈದ್ಯ ಲೋಕವೇ ಹುಬ್ಬೇರುವಂತೆ ಮಾಡಿದೆ.