ಕೋಲಾರ : ಪ್ರಪಂಚದಲ್ಲಿ ಜಾಗತಿಕ ಯುದ್ದ ಭೀತಿಯಿದೆ. ಜಾಗತಿಕ ಯುದ್ದದಿಂದ ನಮ್ಮ ದೇಶದ ಮೇಲೂ ಪರಿಣಾಮ ಬೀರಲಿದೆ. ಈ ಪ್ರಸಕ್ತ ವರ್ಷದಲ್ಲಿ ಗುಡುಗು, ಸಹಿತ ಮಳೆ ಹೆಚ್ಚಾಗಲಿದೆ. ಇದು ಕೋಲಾರದಲ್ಲಿ ಕೋಡಿಮಠದ ಶ್ರೀಗಳು ನುಡಿದ ಭವಿಷ್ಯ.
ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಸ್ಫೋಟಕ ಭವಿಷ್ಯವನ್ನು ನುಡಿದಿದ್ದಾರೆ. ಕೋಡಿಮಠದ ಸ್ವಾಮಿಜಿಗಳು ಹೇಳುವ ಪ್ರಕಾರ ಪ್ರಪಂಚದಲ್ಲಿ ಜಾಗತಿಕ ಯುದ್ದ ಭೀತಿ ಹೆಚ್ಚಾಗಲಿದೆ. ಜಾಗತಿಕ ಯುದ್ದದಿಂದ ನಮ್ಮ ದೇಶದ ಮೇಲೂ ಪರಿಣಾಮ ಬೀರಲಿದೆ. ಅಷ್ಟೇ ಅಲ್ಲ ಈ ಪ್ರಸಕ್ತ ವರ್ಷದಲ್ಲಿ ಗುಡುಗು, ಸಹಿತ ಮಳೆ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.
ಒಂದೇ ಪಕ್ಷ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದೆ ಎಂದು ಹೇಳಿದ್ದೆ. ಅದೇ ರೀತಿ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇತ್ತೀಚೆಗೆ ಸಂಭವಿಸಿದ ರೈಲು ದುರಂತಗಳು ಮತ್ತೆ ಎರಡು ಮೂರು ಬಾರಿ ಮರುಕಳಿಸಲಿದೆ ಎಂದು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ.
ಜನರು ದೈವ ಭಕ್ತಿಯಿಂದ ಎಲ್ಲವನ್ನೂ ಎದುರಿಸಬೇಕಿದೆ. ಭೂಮಿ ಬಿರುಕು ಬೀಳಲಿದೆ, ಬಾಂಬ್ ದಾಳಿಗಳು ಆಗಲಿದೆ, ದೊಡ್ಡ ನದಿಗಳ ಅಪಾಯವಿದೆ, ಮತೀಯ ಸಮಸ್ಯೆ ಇನ್ನು ಬಗೆಹರಿದಿಲ್ಲ ಎಂದು ಭವಿಷ್ತ ನುಡಿದ್ದಾರೆ.
ಅಸಲಿಗೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರದಲ್ಲಿ ಹೇಳಿಕೆ ನೀಡಿದ್ದಾರೆ. ಗ್ರಾಮದ ಚೌಡೇಶ್ವರಿ ದೇಗುಲದ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.