ಲಂಡನ್: ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ (WTC)ನ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ನಡೆದಿರುವ ಆರೋಪ ಕೇಳಿ ಬಂದಿದೆ.
ಪಂದ್ಯದ 2ನೇ ದಿನದಂದು ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಬಾಲ್ ಟ್ಯಾಂಪರಿಂಗ್ ಮಾಡಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗರೊಬ್ಬರು ಆರೋಪಿಸಿದ್ದಾರೆ. ಸದ್ಯ, ಇದು ಹೊಸ ಚರ್ಚೆಯೊಂದನ್ನು ಹುಟ್ಟು ಹಾಕಿದೆ. ಪಾಕಿಸ್ತಾನದ ಪರ 50 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು 19 ಟೆಸ್ಟ್‌ಗಳನ್ನು ಆಡಿರುವ ಬಸಿತ್ ಅಲಿ, ಕ್ಯಾಮರೂನ್ ಗ್ರೀನ್‌ನ 14ನೇ ಓವರ್‌ನಲ್ಲಿ ಪೂಜಾರ ಔಟಾದರೆ, ಮಿಚೆಲ್ ಮಾರ್ಷ್ನ 19ನೇ ಓವರ್ನ ಕೊಹ್ಲಿ ಔಟ್ ಆಗಿದ್ದರು. ಆದರೆ ಇವರ ಬೌಲಿಂಗ್ ವೇಳೆ ಚೆಂಡು ವಿರುದ್ಧ ದಿಕ್ಕಿನಲ್ಲಿ ಸ್ವಿಂಗ್ ಆಗಿರುವುದು ಸ್ಪಷ್ಟವಾಗಿದೆ.
ಅಲ್ಲದೇ ಆಸ್ಟ್ರೇಲಿಯಾ ಆಟಗಾರರು ಚೆಂಡಿನ ಸ್ವರೂಪವನ್ನು ತಿರುಚಲು ಬ್ಯಾಂಡೇಜ್ ಬಳಕೆ ಮಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಅಂಪೈರ್ಗಳು, ಪಂದ್ಯದ ನಿರೂಪಕರು ಹಾಗೂ ಅಧಿಕಾರಿಗಳು ಸೇರಿದಂತೆ ಯಾರೂ ಆಸ್ಟ್ರೇಲಿಯದ ತಂತ್ರಗಳನ್ನು ಗಮನಿಸದೇ ಇರುವುದನ್ನು ಕಂಡು ನನಗೆ ಆಘಾತವಾಯಿತು. ಜಡೇಜಾ ಬ್ಯಾಟಿಂಗ್ ಮಾಡುವಾಗಲೂ ಹೀಗೆ ಆಗಿದೆ ಎಂದು ಬಸಿತ್ ಅಲಿ ಹೇಳಿದ್ದಾರೆ.