ಬೆಂಗಳೂರು: ಸರ್ಕಾರದ ಮಹತ್ವಾ ಕಾಂಕ್ಷೆ ಯೋಜನೆ ಶಕ್ತಿ ಯೋಜನೆ (Shakthi Yojane) ಗೆ ಸಿಎಂ ಸಿದ್ದರಾಮಯ್ಯ (Siddaramaiah) ಅವರು ನಾಳೆ ಬೆಳಿಗ್ಗೆ 11ಕ್ಕೆ ಬಸ್ ಕಂಡಕ್ಟರ್ ಆಗಿ ಚಾಲನೆ ನೀಡಲಿದ್ದಾರೆ.
ಘನ ಉಪಸ್ಥಿತಿಯನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ವಹಿಸಲಿದ್ದಾರೆ. ಡಿ.ವಿ.ಸದಾನಂದಗೌಡ (DV Sadananda Gowda), ತೇಜಸ್ವಿಸೂರ್ಯ ಸೇರಿದಂತೆ ಬಿಜೆಪಿ (BJP) ಸಂಸದರಿಗೂ ಆಹ್ವಾನ ನೀಡಲಾಗಿದೆ. ಈ ಯೋಜನೆಯನ್ನು ಹಬ್ಬದಂತೆ ಆಚರಿಸಿ, ಚಾಲನೆ ನೀಡಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಬಸ್ನಲ್ಲಿ ಸಿದ್ದರಾಮಯ್ಯ ನಾಲ್ಕು ಕಿಲೋಮೀಟರ್ ವರೆಗೂ ರೌಂಡ್ಸ್ ಹಾಕಲಿದ್ದು, ಬಿಎಂಟಿಸಿಯ ಬಿಎ-6 ಬಸ್ನಲ್ಲಿ ಸಂಚರಿಸಲಿದ್ದಾರೆ. ನಾಲ್ಕು ಸಾರಿಗೆ ನಿಗಮಗಳ ಎಂಟು ಬಸ್ಗಳಿಗೆ ಸಿಎಂ ಚಾಲನೆ ನೀಡಲಿದ್ದಾರೆ. ಒಂದು ನಿಗಮದಿಂದ ಎರಡು ಬಸ್ಗಳಿಗೆ ವಿಧಾನಸೌಧ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಸಿಎಂ ಹಾಗೂ ಮಂತ್ರಿಮಂಡಲ ವಿಧಾನಸೌಧ ಟು ವಿಧಾನಸೌಧಕ್ಕೆ ಬಸ್ನಲ್ಲಿ ಸಂಚಾರ ನಡೆಸಲಿದ್ದಾರೆ.
ಪ್ರಥಮ ಫ್ರೀ ಟಿಕೆಟ್ ನ್ನು ಸಿಎಂ ಸಿದ್ದರಾಮಯ್ಯ ವಿತರಿಸಲಿದ್ದಾರೆ. ಶಕ್ತಿ ಯೋಜನೆ ಚಾಲನೆ ಸಂದರ್ಭದಲ್ಲಿ ಮಾಡೆಲ್ ಶಕ್ತಿ ಸ್ಮಾರ್ಟ್ ಕಾರ್ಡ್ ಪರಿಚಯಿಸಲು ಪ್ಲಾನ್ ಮಾಡಲಾಗಿದೆ. ಮಾಡೆಲ್ ಶಕ್ತಿ ಸ್ಮಾರ್ಟ್ ಕಾರ್ಡ್ (Smart Card) ನಲ್ಲಿ ಶಕ್ತಿ ಯೋಜನೆ ಹೆಸರು, ಲೋಗೋ, ಮಹಿಳೆಯ ಹೆಸರು, ವಿಳಾಸ, ಬಾರ್ ಕೋಡ್ ಇರುತ್ತದೆ. ಈ ಸಂದರ್ಭದಲ್ಲಿ ಶಕ್ತಿ ಲೋಗೋ, ಲಾಂಚನ ಅನಾವರಣ ಮಾಡಲಿದ್ದಾರೆ.