Kornersite

Crime International Just In

ಹಿಂದು ಬಾಲಕಿಯನ್ನು ಅಪಹರಿಸಿ, ಮತಾಂತರ ಮಾಡಿ, ಮದುವೆ ಮಾಡಿಕೊಂಡ ವ್ಯಕ್ತಿ; ಪಾಕ್ ಕೋರ್ಟ್ ನಿರಾಕರಣೆ

ಹಿಂದು ಬಾಲಕಿಯನ್ನು ಕಿಡ್ನ್ಯಾಪ್‌ ಮಾಡಿ ಬಲವಂತವಾಗಿ ಇಸ್ಲಾಂಗೆ (Islam) ಮತಾಂತರ ಮಾಡಲಾಗಿದ್ದು, ಸದ್ಯ ಪೋಷಕರೊಂದಿಗೆ ಬಾಲಕಿ ತೆರಳುತ್ತೇನೆಂದರೂ ಪಾಕಿಸ್ತಾನ ಕೋರ್ಟ್‌ (Pakistan Court) ನಿರಾಕರಿಸಿದೆ.

ಸಿಂಧ್ ಪ್ರಾಂತ್ಯದಲ್ಲಿ 14 ವರ್ಷದ ಹಿಂದೂ ಬಾಲಕಿಯನ್ನು ಅಪಹರಿಸಿ, ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆ ಮಾಡಲಾಗಿದೆ. ಅಲ್ಲದೇ, ಬಾಲಕಿಯನ್ನು ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಪೋಷಕರ ಜೊತೆಗೆ ಹೋಗಲು ಆಕೆ ಬಯಸಿದರೂ, ಕಳುಹಿಸಲು ಪಾಕ್‌ ಕೋರ್ಟ್‌ ನಿರಾಕರಿಸಿದೆ.

ಜೂ. 2 ರಂದು ದಕ್ಷಿಣ ಸಿಂಧ್ ಪ್ರಾಂತ್ಯದ ಬೆನಜಿರಾಬಾದ್ ಜಿಲ್ಲೆಯ ನಿವಾಸಿಯಾಗಿದ್ದ ಬಾಲಕಿಯನ್ನು ಆಕೆಯ ತಾಯಿಯ ಎದುರೇ ಗನ್ ತೋರಿಸಿ ಅಪಹರಿಸಲಾಗಿತ್ತು. ತನ್ನ ಮಗಳನ್ನು ಪಹರಿಸಲಾಗಿದೆ ಎಂದು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಾಲಕಿಯನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿ ಮುಸ್ಲಿಂ ವ್ಯಕ್ತಿಯೊಂದಿಗೆ ಆಕೆಯನ್ನು ಮದುವೆ ಮಾಡಲಾಗಿದೆ. ಈ ಕುರಿತು ಪಾಪಿಗಳು ವಿಡಿಯೋ ಕೂಡ ಮಾಡಿದ್ದಾರೆ. ಐದ ದಿನಗಳ ನಂತರ ಬಾಲಕಿ ಸಾಮಾಜಿಕ ಜಾಲತಾಣದಲ್ಲಿ ತನ್ನ ಅಳಲು ತೋಡಿಕೊಂಡು ವೀಡಿಯೋ ಮಾಡಿದ್ದಳು. ನಂತರ ಕಾರ್ಯಪ್ರವೃತ್ತರಾದ ಮನೆಯವರು ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ.

ಆಕೆಯನ್ನು ಲರ್ಕಾನಾದ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ತನ್ನನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿದ್ದಾರೆ. ನಾನು ನನ್ನ ಪೋಷಕರ ಬಳಿಗೆ ಹೋಗಬೇಕು ಎಂದು ನ್ಯಾಯಾಧೀಶರ ಮುಂದೆ ಬಾಲಕಿ ಹೇಳಿದ್ದಾಳೆ. ಆದರೆ, ನ್ಯಾಯಾಲಯ ಈ ಪ್ರಕರಣದ ವಿಚಾರಣೆಯನ್ನು ಜೂ. 12ಕ್ಕೆ ಮುಂದೂಡಿದೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Crime

ಬೈಕ್ ನಲ್ಲಿಯೇ ಸಹೋದರಿಯ ಶವ ಸಾಗಿಸಿದ ಅಣ್ಣ!

ನವದೆಹಲಿ : ಆಂಬುಲೆನ್ಸ್ ಬರುವುದಕ್ಕೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಸಹೋದರಿಯ ಮೃತ ದೇಹವನ್ನು ಬೈಕ್ ನಲ್ಲಿಯೇ ತೆಗೆದುಕೊಂಡು ಹೋಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕೌಶಾಂಬಿಯಲ್ಲಿ