ಚೆನ್ನೈ: ಆ ಜೊಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಕೇವಲ ಒಂದು ವಾರ ಮಾತ್ರ ಕಳೆದಿತ್ತು. ಒಂದೇ ವಾರದಲ್ಲಿ ದುರಂತ ಸಾವನ್ನ ಕಂಡಿದ್ದಾರೆ. ಈ ಘಟನೆ ನಡೆದಿದ್ದು, ಇಂಡೋನೇಷ್ಯಾದ ಬಾಲಿಯಲ್ಲಿ.
ಚೆನ್ನೈ ಮೂಲದ ವೈದ್ಯ ದಂಪತಿ ಹನಿಮೂನ್ ಗೆ ಇಂಡೋನೇಷ್ಯಾದ ಬಾಲಿಗೆ ಹೋಗಿದ್ದರು. ಹನಿಮೂನ್ ಅಂದ್ರೆ ಫೋಟೋಶೂಟ್ ಇರಲೇಬೇಕು ಅಂತ ಶುಕ್ರವಾರ ಸ್ಪೀಡ್ ಬೋಟ್ ನಲ್ಲಿ ಹೋಗಿದ್ದರು. ಇದೇ ವೇಳೆ ಬೋಟ್ ಸಮತೋಲನ ಕಳೆದುಕೊಂಡು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ವೈದ್ಯ ದಂಪತಿ ಲೋಕೇಶ್ವರನ್ ಮತ್ತು ವಿಬುಷ್ನಿಯಾ ಜೂನ್ ಒಂದರಂದು ಪೂನಮಲ್ಲೆಯಲ್ಲಿ ಮ್ಯಾರೇಜ್ ಆಗಿದ್ದರು. ಪ್ರೀತಿಸಿ ಮದುವೆಯಾಗಿದ್ದ ವೈದ್ಯ ದಂಪತಿ ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದರು. ಹಲವು ಕಪಲ್ ಆಸೆ ಪಡುವಂತೆ ಈ ವೈದ್ಯ ದಂಪತಿಗಳು ಕೂಡ ಹನಿಮೂನ್ ಗೆ ಬಾಲಿಗೆ ಹೋಗಲು ಆಸೆ ಪಟ್ಟು ಹೋಗಿದ್ದರು. ಬಾಲಿ ದ್ವೀಪದಲ್ಲಿ ಸ್ಪೀಡ್ ಮೋಟಾರ್ ಬೋಟ್ ಮೂಲಕ ತಮ್ಮ ಫೋಟೋ ಶೂಟ್ ಮಾಡಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಹಲವು ಕನಸುಗಳನ್ನ ಕಟ್ಟಿಕೊಂಡು ಮುಂದಿನ ಜೀವನದ ಬಗ್ಗೆ ಸಾಕಷ್ಟು ಆಕಾಂಕ್ಷೆಗಳನ್ನ ಇತ್ಟುಕೊಂಡಿದ್ದ ಜೋಡಿ ಈ ರೀತಿ ಸಾವು ಕಂಡಿರುವುದು ನಿಜಕ್ಕೂ ದುರಂತ.