ಒಂದಲ್ಲ ಒಂದು ಕಾರಣಗಳಿಂದ ಸುದ್ದಿಯಲ್ಲಿರುವ ಗೆಹನಾ ವಸಿಷ್ಟ(Gehana Vasista) ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅದು ಏನಪ್ಪ್ ಅಂದ್ರೆ ಗೆಹನಾ ಮದುವೆಯಾಗಿದ್ದಾರೆ. ಮದುವೆ ಆದ್ರೆ ಏನಂತೆ..ಇದ್ರಲ್ಲೆನಿದೆ ಸುದ್ದಿ ಅಂದುಕೊಬೇಡಿ. ಮ್ಯಾಟರ್ ಹೋಗ್ತಾ ಹೋಗ್ತಾ ನಿಮಿಗೆ ಗೊತ್ತಾಗುತ್ತೆ.
ಬಾಲಿವುಡ್ ಹಿರೋಯಿನ್ ಶಿಲ್ಪಾ ಶೆಟ್ಟಿ ಕುಂದ್ರಾ ಅವರ ಪತಿ ರಾಜ್ ಕುಂದ್ರಾ ಪೋರ್ನ್ ವಿಡಿಯೋ ಕೇಸ್ ನಲ್ಲಿ ಸಿಕ್ಕಿಬಿದ್ದಿದ್ದರು ಗೆಹನಾ. ಈ ವಿಚಾರವಾಗಿ ಮುಂಬೈನ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು. ಅಶ್ಲೀಲ ವಿಡಿಯೋಗಳನ್ನ ಚಿತ್ರಿಕರಿಸಿ ವೆಬ್ ಸೈಟ್ ಗೆ ಅಪಲೋಡ್ ಮಾಡುತ್ತಿದ್ದರು ಎನ್ನುವ ಆರೋಪ ಇತ್ತು.
ಬಿಕಿನಿ ಫೋಟೋ ಶೂಟ್ ಮಾಡಿಸಿಕೊಂಡು ಬೋಲ್ಡ್ ಫೋಟೋಗಳನ್ನ ಶೇರ್ ಮಾಡುತಿದ್ದರು ಗೆಹನಾ. ಇದೇ ವಿಚಾರಕ್ಕೆ ಸುದ್ದಿ ಕೂಡ ಆಗಿದ್ರು. ಇವಾಗ ಅಸಲಿ ಮ್ಯಾಟರ್ ಗೆ ಬರೋಣ. ತಮ್ಮ ಬಹುಕಾಲದ ಗೆಳೆಯ ಫೈಜನ್ ಅನ್ಸಾರಿ ಎನ್ನುವವರನ್ನು ಗೆಹನಾ ಮದುವೆಯಾಗಿದ್ದಾರೆ. ಇದಾದ ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾರೆ. ಮುಸ್ಲಿಂ ಸಂಪ್ರದಾಯದಂತೆ ಇವರ ಮದುವೆ ನಡೆದಿದ್ದು, ಸಾಮಾಜುಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿವೆ.
ಗೆಹನಾ ವಷಿಶ್ಟ ಹಾಗೂ ಫೈಜನ್ ಅನ್ಸಾರಿ ಮದುವೆ ಬಗ್ಗೆ ನೆಟ್ಟಿಗರು ಸಿಕ್ಕಾಪಟ್ಟೆ ಕಮೆಂಟ್ ಮಾಡುತ್ತಿದ್ದಾರೆ. ಆದರೆ ಗೆಹನಾ ಮಾತ್ರ ಮದುವೆ ಕಾರಣಕ್ಕಾಗಿ ಮತಾಂತರವಾಗಿಲ್ಲ. ಇದು ತಮ್ಮ ಸ್ವಂತ ನಿರ್ಧಾರ ಎಂದು ತಿಳಿಸಿದ್ದಾರೆ. ಫೈಜನ್ ಸೋಶಿಯಲ್ ಮಿಡಿಯಾ ಇನ್ ಫ್ಲೂಯೆನ್ಸರ್. ಕೆಲವು ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದರು.