ಕಣ್ಣೂರು (ಕೇರಳ): ಕೇರಳದ ಕಣ್ಣೂರಿಗೆ ಸಮೀಪದ ಮುಜಪ್ಪಿಲಂಗಾಡ್ ನಲ್ಲಿ ಭಾನುವಾರ ಸಾಯಂಕಾಲ ಬೀದಿ ನಾಯಿಗಳು ಬಾಲಕನ ಮೇಲೆ ಅಟ್ಯಾಕ್ ಮಾಡಿದ್ದಾವೆ. ಪರಿಣಾಮ 11 ವರ್ಷದ ವಿಶೇಷ ಚೇತನ ಬಾಲಕ ಆಸ್ಪತೆಯಲ್ಲಿ ಮೃತಪಟ್ಟಿದ್ದಾನೆ.
ಕೆಟ್ಟಿನಕಂ ನಿವಾಸಿ ನಿಹಾಲ್ ಎನ್ನುವವನು ಮನೆಯಿಂದ 300 ಮೀಟರ್ ದೂರದಲ್ಲಿ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದುಕೊಮ್ಡು ಹೋದರೂ ಕೂಡ ಪ್ರಯೋಜನವಾಗಲಿಲ್ಲ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ. ಅಸಲಿಗೆ ನಿಹಾಲ್ ಆಟಿಸಂನಿಂದ ಬಳಲುತ್ತಿದ್ದ. ಮನೆಯ ಬಳಿಯೇ ಓಡಾಡಿಕೊಂಡು ಇದ್ದವನು ಸಡನ್ ಆಗಿ ಕಾಣಲಿಲ್ಲ. ಎಲ್ಲರೂ ಹುಡುಕಾಟ ನಡೆಸಿದ್ದಾರೆ. ಪೊಲೀಸರಿಗೂ ವಿಷಯ ತಿಳಿಸಿದ್ದಾರೆ. ಪೊಲೀಸರು ಕೂಡ ಹುಡುಕಾಟ ನಡೆಸಿದ್ದಾರೆ. ಆದ್ರೆ ಬಾಲಕ ರಾತ್ರಿ 8.30ರ ಸುಮಾರಿಗೆ ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಈ ಘಟನೆ ಕುರಿತು ಸಾರ್ವಜನಿಕರು ಟೀಕೆ ಮಾಡಿದ್ದಾರೆ. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಅದನ್ನು ತಡೆಯಲಿ ಕೇರಳ ಸರ್ಕಾರ ವಿಫಲವಾಗಿದೆ ಎಂದು ಆರೋಪ ಮಾಡಿದ್ದಾರೆ.