ಕಾಂಗ್ರೆಸ್ ಸರ್ಕಾರದ ಕನಸಿನ ಪ್ರಾಜೆಕ್ಟ್ ಇಂದಿರಾ ಕ್ಯಾಂಟೀನ್. ಈಗ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿದೆ. ಹಾಗಾದ್ರೆ ಇಂದಿರಾ ಕ್ಯಾಂಟೀನ್ ಕೂಡ ಪುನರಾಂಭ ಆಗಲೇ ಬೇಕಲ್ವಾ. ಯಸ್, ಈಗಾಗಲೇ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ.
ಹೊಸದಾಗಿ 50 ಇಂದಿರಾ ಕ್ಯಾಂಟೀನ್ ನಿರ್ಮಿಸಲು ಬಿಬಿಎಂಪಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಕೊಟ್ತಿದೆ. ಇದಕ್ಕಾಗಿ ಮೂವತ್ತು ಕೋಟಿ ಅನುದಾನಕ್ಕೆ ಕೋರಿಕೆ ಇಡಲಾಗಿದೆ. 15 ಕೋಟಿ ಹಾಲಿ ಕ್ಯಾಂಟೀನ್ ಗಳ ಮೇಲ್ದರ್ಜೆಗೆ ಹಾಗೂ 15 ಕೋಟಿ ಹೊಸ ಕ್ಯಾಂಟೀನ್ ನಿರ್ಮಾಣಕ್ಕೆ ಪ್ರಸ್ತಾವನೆ ಇಡಲಾಗಿದೆ.
ಈ ಹಿಂದೆ ಸಿದ್ದರಾಮಯ್ಯ ಸರ್ಕಾರವು ಇಂದಿರಾ ಕ್ಯಾಂಟೀನ್ ಯೋಜನೆ ಆರಂಭಿಸಿತ್ತು. ನಂತರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಹಾಗೂ ಬಿಜೆಪಿ ಸರ್ಕಾರ ಬಂದ ಮೇಲೆ ಸರಿಯಾಇ ಅನುದಾನ ಸಿಗದೇ ಕಾಂಟೀನ್ ಮುಚ್ಚುವ ಸ್ಥಿತಿಗೆ ತಲುಪಿತ್ತು.
ಇದೀಗ ಇಂದಿರಾ ಕ್ಯಾಂಟಿನ್ ಮೆನು ಕೂಡ ಚೇಂಜ್ ಆಗಲಿದೆ. ಹಾಗೂ ಗುಣಮಟ್ಟ ಕೂಡ ಬದಲಾಗಲಿದೆ.