ಕೋಲಾರ: ಈ ಪಾಪಿ ತಂದೆ ಮಾಡಿರೋದನ್ನ ಕೇಳಿದ್ರೆ ಯಾರಿಗಾದ್ರು ಕರಳು ಚುರುಕ್ ಅನ್ನುತ್ತೆ. ಕುಡಿದ ಮತ್ತಿನಲ್ಲಿ ತನ್ನ ಎರಡು ವರ್ಷದ ಮಗುವನ್ನೇ ಕೊಂದಿದ್ದಾನೆ. ಅಸಲಿಗೆ ಈ ಘಟನೆ ನಡೆದಿರೋದು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕೆ.ಬಿ ಕೊತ್ತೂರು ಗ್ರಾಮದಲ್ಲಿ.
ಇಂತ ಹೇಯ್ಯ ಕೃತ್ಯ ಮಾಡಿದವನ ಹೆಸರು ಗಂಗಾಧರ. ಕೂಲಿ ಕೆಲಸ ಮಾಡಿಕೊಂಡಿದ್ದ ಗಂಗಾಧರ 9 ವರ್ಷಗಳ ಹಿಂದೆ ರೇಣುಕಾ ಎನ್ನುವವಳನ್ನ ಪ್ರೀತಿಸಿ ಮದುವೆಯಾಗಿದ್ದ. ಈ ದಂಪತಿಗೆ ಮೂರು ಜನ ಮಕ್ಕಳು ಇದ್ದಾರೆ. ಆದ್ರೆ ಗಂಗಾಧರ ಸದಾ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಮಕ್ಕಳನ್ನು ಕೂಡ ಹೊಡೆಯುತ್ತಿದ್ದ. ಈತನ ಕಾಟ ತಾಳಲಾರದೇ ಮೂವರು ಮಕ್ಕಳೊಂದಿಗೆ ರೇಣುಕಾ ತನ್ನ ತವರು ಮನೆಗೆ ಹೋಗಿದ್ದಳು.
ಆದ್ರೆ ಏಕಾಏಕಿಯಾಗಿ ಬಂದು ಇನ್ಮುಂದೆ ಕುಡಿಯುವುದಿಲ್ಲ ಎಂದು ಹೇಳಿ ಹೆಂಡ್ತಿ ಹಾಗೂ ಮಕ್ಕಳನ್ನ ಮನೆಗೆ ಕರೆದಿದ್ದಾನೆ. ಆದ್ರೆ ರೇಣುಕಾಳ ಅಣ್ಣ್ ಯಾರಾದ್ರು ದೊಡ್ಡವರನ್ನ ಕರೆದುಕೊಂಡು ಬಾ ಎಂದು ಹೇಳಿದ್ದಾನೆ. ಆಯ್ತು ಎಂದು ಹೋದವನು ಜೂನ್ 12 ರ ಸಂಜೆ ಮನೆಗೆ ಬಂದಿದ್ದಾನೆ. ತಿಂಡಿ ಕೊಡಿಸುವ ನೆಪದಲ್ಲಿ ತನ್ನ ಎರಡನೇ ಮಗಳು ಅಕ್ಷತಾ ಹಾಗೂ ಮೂರನೇ ಮಗು ರಮ್ಯಾಳನ್ನ ಕರೆದುಕೊಂಡು ಹೋಗಿದ್ದಾನೆ. ಅಂಗಡಿ ಬಳಿ ಹೋಗ್ತಾ ಇದ್ದಂತೆ ಅಕ್ಷತಾಳಿಗೆ ಹೊಡೆಯಲಿ ಆರಂಭಿಸಿದ್ದಾನೆ. ಭಯಗೊಂಡೆ ಆಕೆ ಮನೆಗೆ ಬಂದಿದ್ದಾಳೆ. ನಂತರ ಗ್ರಾಮದ ಹೊರವಯಲಯದಲ್ಲಿ ತನ್ನ್ ಜಮೀನಿನ ಬಳಿ ರಮ್ಯಾಳನ್ನ ಕರೆದುಕೊಂಡು ಹೋಗಿ ಸಾಯಿಸಿದ್ದಾನೆ.
ಕುಡಿದ ಅಮಲಿನಲ್ಲಿ ಮಗುವಿನ ಎದೆಗೆ ಗುದ್ದಿ ಸಾಯಿಸಿದ್ದಾನೆ. ಅಷ್ಟೇ ಅಲ್ಲ ಈ ಹಿಂದೆ ಜಗಳವಾದಾಗ ತನ್ನ ಹೆಂಡ್ತಿಗೆ ಕಿವಿಗೆ ಬಲವಾಗಿ ಹೊಡೆದಿದ್ದರಿಂದ ಆಕೆಗೆ ಈಗಲೂ ಕಿವಿ ಸರಿಯಾಗಿ ಕೇಳಿಸುವುದಿಲ್ಲ.